Advertisement

China ಹೊಸ ದುಸ್ಸಾಹಸ ; ಸಿಕ್ಕಿಂ ಗಡಿಯಲ್ಲಿ ಯುದ್ಧ ವಿಮಾನ!

02:00 AM May 31, 2024 | Team Udayavani |

ಹೊಸದಿಲ್ಲಿ: ಮೂರು ವರ್ಷಗಳಿಂದ ಚೀನವು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸೇನಾ ಸೌಲಭ್ಯಗಳನ್ನು ಪಾಕಿಸ್ಥಾನದ ಜತೆಗೂಡಿ ವೃದ್ಧಿಸುತ್ತಿರುವ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಸಿಕ್ಕಿಂ ಗಡಿಯಿಂದ 150 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಅದು ಮೇ 27ರಂದು ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ನಿಯೋಜಿಸಿರುವ ಮಾಹಿತಿಯು ಈಗ ತಿಳಿದುಬಂದಿದೆ.

Advertisement

ಈ ಸಂಬಂಧದ ಫೋಟೋಗಳು ಬಹಿರಂಗವಾಗಿದ್ದು, ಚೀನೀ ವಾಯುಪಡೆಯ ಜೆ-20 ಯುದ್ಧ ವಿಮಾನಗಳನ್ನು ಟಿಬೆಟ್‌ನ 2ನೇ ಅತಿದೊಡ್ಡ ನಗರವಾದ ಶಿಗಾತ್ಸೆಯ ಸೇನಾ ಮತ್ತು ನಾಗರಿಕ ಬಳಕೆಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಈ ವಿಮಾನಗಳ ಜತೆಗೆ ಕೆ.ಜೆ-500 ಏರ್‌ಬೋರ್ನ್ ಅರ್ಲಿ ವಾರ್ನಿಂಗ್‌ ಮತ್ತು ಕಂಟ್ರೋಲ್‌ ಏರ್‌ಕ್ರಾಫ್ಟ್ ಕೂಡ ಇರುವುದನ್ನು ಕಾಣಬಹುದು. ವಿಶೇಷ ಎಂದರೆ ಭಾರತಕ್ಕೆ ತೀರಾ ಸಮೀಪದಲ್ಲಿ ನಡೆದಿರುವ ಈ ಬೆಳವಣಿಗೆ ಭಾರತೀಯ ವಾಯುಪಡೆಗೆ ತಿಳಿದಿದೆ ಎನ್ನಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದಕ್ಕೆ ಪ್ರತಿಯಾಗಿ ಭಾರತದ ಬಳಿ ರಫೇಲ್‌ ಯುದ್ಧವಿಮಾನಗಳಿವೆ. ಭಾರತೀಯ ವಾಯುಪಡೆಯ 2ನೇ ರಫೇಲ್‌ ಸ್ಕ್ವಾಡ್ರನ್‌ ಪಶ್ಚಿಮ ಬಂಗಾಲದ ಹಾಸಿಮಾರಾದಲ್ಲಿದೆ. ಈ ಪ್ರದೇಶವು ಚೀನದ ಯುದ್ಧವಿಮಾನಗಳಿರುವ ಸ್ಥಳದಿಂದ ಹೆಚ್ಚುಕಡಿಮೆ 290 ಕಿ.ಮೀ. ದೂರದಲ್ಲಿದೆ.

ಅತ್ಯಾಧುನಿಕ ಯುದ್ಧವಿಮಾನ

ಜೆ-20 ಚೀನದ ಇದುವರೆಗಿನ ಅತ್ಯಾಧುನಿಕ ಯುದ್ಧವಿಮಾನವಾಗಿದೆ. ಸಾಮಾನ್ಯವಾಗಿ ಈ
ಯುದ್ಧ ವಿಮಾನಗಳನ್ನು ಚೀನದ ಪೂರ್ವ ಪ್ರಾಂತ್ಯ
ಗಳಲ್ಲಿ ನಿಯೋಜಿಸಲಾಗುತ್ತದೆ. ಈಗ ಇವು ಶಿಗಾತ್ಸೆಯಲ್ಲಿವೆ ಎಂದು ಆಲ್‌ ಸೋರ್ಸ್‌ ಅನಾಲಿಸಿಸ್‌ ಅಭಿಪ್ರಾಯಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next