Advertisement
ಅಷ್ಟೇ ಅಲ್ಲ, ಯುದ್ಧದ ಸಮಯದಲ್ಲಿ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ. ಹೆದ್ದಾರಿಗಳಲ್ಲದೆ ವಿಮಾನ ಇಳಿದಾಣಗಳನ್ನೂ ನಿರ್ಮಾಣ ಮಾಡುತ್ತಿದೆ. ಚೀನವು ಗಾಲ್ವಾನ್‌ನಲ್ಲಿ ಪೆಟ್ಟುತಿಂದ ಬಳಿಕ ಹಲವು ಬಾರಿ ಪ್ರಚೋದಕ ಕಿಡಿಗೇಡಿತನ ಪ್ರದರ್ಶಿಸಿದೆ. ಹೊಸ ದಾಗಿ ನಡೆಯುತ್ತಿರುವ ನಿರ್ಮಾಣ ಕಾರ್ಯ ಗಳಿಂದಾಗಿ ತನ್ನ ವ್ಯಾಪ್ತಿಯ ಗಾರ್ ಗುನ್ಸಾ, ಹೊಟಾನ್‌ಗಳಿಂದ ಭಾರತದ ಗಡಿಯತ್ತ ಕ್ಷಿಪ್ರವಾಗಿ ಸೇನೆಯನ್ನು ನುಗ್ಗಿಸಲು ಅನುಕೂಲಕರವಾಗಿರುವ ವಾತಾವರಣವನ್ನು ಚೀನ ಸೃಷ್ಟಿ ಮಾಡಿಕೊಳ್ಳುತ್ತಿದೆ.
ಚೀನವು ತನ್ನ ವಶದಲ್ಲಿ ಇರುವ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಈಗಾಗಲೇ ಕ್ಷಿಪಣಿಗಳನ್ನು ನಿಯೋಜನೆ ಮಾಡಿದೆ. ಇದೇ ಉದ್ದೇಶಕ್ಕಾಗಿ ಹಲವು ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಿದೆ. ಉದ್ದೇಶಪೂರ್ವಕವಾಗಿ ಡ್ರೋನ್ ಗಸ್ತು ಹೆಚ್ಚಿಸಿದೆ. ಹಿಂದಿನ ಸಿದ್ಧತೆಗಳಿಗೆ ಹೋಲಿಸಿದರೆ ಈ ಬಾರಿಯ ತಯಾರಿ ಹೆಚ್ಚು ಬಿರುಸಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಮುಂಬಯಿ ಟೆಸ್ಟ್ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ
Related Articles
ಚೀನದ ಯಾವುದೇ ರೀತಿಯ ದುಸ್ಸಾಹಸವನ್ನು ತಡೆಯವುದಕ್ಕಾಗಿ ಭಾರತ ಕೂಡ ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಚೀನದ ಜತೆಗೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಉನ್ನತ ಮಟ್ಟಕ್ಕೇರಿಸುವ ಕಾರ್ಯವನ್ನು ಬಿರುಸುಗೊಳಿಸಿದೆ. ಇದುವರೆಗೆ ಪಾಕಿಸ್ಥಾನವನ್ನು ಕೇಂದ್ರೀಕರಿಸಿದ್ದ ಸೇನಾ ಪಡೆಗಳನ್ನು ಚೀನ ಗಡಿಯತ್ತ ನುಗ್ಗಲು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನಗಳ ಪೈಕಿ ಕೆಲವನ್ನು ಚೀನದ ವಿರುದ್ಧ ಅಗತ್ಯಬಿದ್ದರೆ ಬಳಸಿಕೊಳ್ಳುವುದಕ್ಕೆ ಸಿದ್ಧವಾಗಿ ಇರಿಸಲಾಗಿದೆ.
Advertisement