Advertisement

ಪಾಕ್‌ನಲ್ಲಿ ಚೀನೀಯರಿಗಿಲ್ಲ ಭದ್ರತೆ

10:33 AM Dec 09, 2017 | Team Udayavani |

ಬೀಜಿಂಗ್‌: ಪಾಕಿಸ್ಥಾನದಲ್ಲಿರುವ ಚೀನೀಯರ ಮೇಲೆ ಉಗ್ರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಚೀನ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದ್ದು, ಸರಣಿ ದಾಳಿ ನಡೆಯಬಹುದಾಗಿದೆ. ಹೀಗಾಗಿ ಚೀನೀಯರು ಪಾಕಿಸ್ಥಾನದಲ್ಲಿ ಜನದಟ್ಟಣೆಯಿರುವ ಪ್ರದೇಶದಿಂದ ದೂರವಿರಬೇಕು ಎಂದು ಸೂಚಿಸಿದೆ. ಕಳೆದ ಜೂನ್‌ನಲ್ಲಿ ಕ್ವೆಟ್ಟಾದಲ್ಲಿ ಇಬ್ಬರು ಚೀನ ಶಿಕ್ಷಕರನ್ನು ಅಪಹರಿಸಿತ್ತು. ಪಾಕಿಸ್ಥಾನದಲ್ಲಿ ಚೀನ ಭಾರಿ ಹೂಡಿಕೆ ಮಾಡಿದ್ದು, ರಸ್ತೆ, ಬಂದರು ಮತ್ತು ಇತರ ಯೋಜನೆಗಳಲ್ಲಿ ಕೆಲಸ ಮಾಡುವುದಕ್ಕಾಗಿ ಚೀನದ ಸಾವಿರಾರು ಜನರು ಪಾಕಿಸ್ಥಾನದಲ್ಲಿ ವಾಸಿಸುತ್ತಿದ್ದಾರೆ. 600 ಕೋಟಿ ಡಾಲರ್‌ ವೆಚ್ಚದಲ್ಲಿ ಬೆಲ್ಟ್ ಆಂಡ್‌ ರೋಡ್‌ ಯೋಜನೆಯನ್ನೂ ಪಾಕ್‌ನಲ್ಲಿ ಚೀನ ಜಾರಿಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next