Advertisement

ಚೀನದಲ್ಲಿ ಸೆ.21ರಿಂದ ಓಡಲಿದೆ ವಿಶ್ವದ ಅತಿ ವೇಗದ ಬುಲೆಟ್‌ ಟ್ರೈನ್‌

04:55 PM Aug 21, 2017 | Team Udayavani |

ಬೀಜಿಂಗ್‌ : ಮುಂದಿನ ತಿಂಗಳು ಸೆ.21ರಿಂದ ಬೀಜಿಂಗ್‌ – ಶಾಂಘೈ ನಡುವೆ, ಗಂಟೆಗೆ 350  ಕಿ.ಮೀ. ವೇಗದಲ್ಲಿ ಓಡುವ, 1,250 ಕಿ.ಮೀ. ದೂರವನ್ನು ಕೇವಲ ನಾಲ್ಕೂವರೆ ತಾಸಿನಲ್ಲಿ ಮುಗಿಸುವ, ವಿಶ್ವದ ಮೊದಲ ಅತೀ ವೇಗದ ಬುಲೆಟ್‌ ರೈಲು ಓಡಾಟವನ್ನು ಚೀನ ಆರಂಭಿಸಲಿದೆ. 

Advertisement

ಪ್ರಕೃತ ಚೀನದ ರಾಜಧಾನಿ ಬೀಜಿಂಗ್‌ನಿಂದ ದೇಶದ ವಾಣಿಜ್ಯ ರಾಜಧಾನಿಯಾಗಿರುವ ಶಾಂಘೈಗೆ ಆರು ತಾಸುಗಳ ರೈಲು ಪ್ರಯಾಣವಿದೆ. 

ಈ ವರ್ಷ ಜೂನ್‌ನಲ್ಲಿ ಚೀನ ಅನಾವರಣಗೊಳಿಸಿದ್ದ ಫ‌ಕ್ಸಿಂಗ್‌ ಬುಲೆಟ್‌ ಟ್ರೈನ್‌ ಗಂಟೆಗೆ 400 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಕಳೆದ ಜುಲೈ 27ರಂದು ಗರಿಷ್ಠ ವೇಗದಲ್ಲಿನ ಈ ರೈಲುಗಳ ಸುರಕ್ಷೆ, ಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಪರೀಕ್ಷಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next