Advertisement

ಚೀನ ಪ್ರವೇಶಕ್ಕೆ ವಿದೇಶಿಯರಿಗೆ ವೀಸಾ ವಿತರಣೆ ಪುನಾರಂಭ

09:26 PM Mar 14, 2023 | Team Udayavani |

ಬೀಜಿಂಗ್‌: ಕೊರೊನಾ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದ ಚೀನ, ಮೂರು ವರ್ಷಗಳ ನಂತರ ಇದೀಗ ವಿದೇಶಿಯರಿಗೆ ತನ್ನ ದೇಶ ಪ್ರವೇಶಿಸಲು ಅನುಮತಿಸಿದೆ.

Advertisement

ಚೀನದ ವಿದೇಶಾಂಗ ಸಚಿವಾಲಯವು ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿದ್ದು, ವಿದೇಶಿ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರಿಗೆ ವೀಸಾ ವಿತರಣೆ ಪುನರಾರಂಭವಾಗಲಿದೆ ಎಂದಿದೆ.

ಚೀನ ಸರ್ಕಾರದ ಈ ನಡೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ. ಕೊರೊನಾ ಲಾಕ್‌ಡೌನ್‌ ಮತ್ತು ವೀಸಾ ನಿರ್ಬಂಧಗಳ ಕಾರಣ, ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳನ್ನು ವಾಪಸು ತವರು ದೇಶಗಳಿಗೆ ಕಳುಹಿಸಲಾಗಿತ್ತು. ಅನೇಕ ಭಾರತೀಯ ವಿದ್ಯಾರ್ಥಿಗಳು ಆ ಸಮಯದಲ್ಲಿ ವಾಪಸು ಭಾರತಕ್ಕೆ ಬಂದಿದ್ದಾರೆ.

ಬುಧವಾರದಿಂದ ವೀಸಾ ವಿತರಣೆಯನ್ನು ಚೀನ ವಿದೇಶಾಂಗ ಸಚಿವಾಲಯ ಆರಂಭಿಸಲಿದೆ. ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬಹುದು. ಇನ್ನೊಂದಡೆ, ಪ್ರವಾಸಿ ವೀಸಾದಡಿ ವಿದೇಶಿಯರಿಗೂ ವೀಸಾ ವಿತರಣೆ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next