Advertisement

23ರಿಂದ 10 ಲಕ್ಷಕ್ಕೆ ಇಳಿಯಲಿದೆ ಚೀನಾದ ಸೇನಾ ಬಲ!

03:20 AM Jul 13, 2017 | Karthik A |

ಬೀಜಿಂಗ್‌: ಜಗತ್ತಿನ ಅತಿ ದೊಡ್ಡ ಮಿಲಿಟರಿ ಪಡೆ ಎನಿಸಿರುವ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯಲ್ಲಿನ (ಪಿಎಲ್‌ಎ) ಯೋಧರ ಸಂಖ್ಯೆಯನ್ನು 23 ಲಕ್ಷದಿಂದ 10 ಲಕ್ಷಕ್ಕೆ ಇಳಿಸಲು ಚೀನಾ ಚಿಂತನೆ ನಡೆಸಿದೆ. ಸೇನೆಯ ಸಂಖ್ಯಾಬಲ ಇಳಿಸುವ ಪ್ರಯತ್ನ ನಡೆಯುತ್ತಿರುವುದು ಚಿನಾ ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲಾಗಿದ್ದು, ವ್ಯೂಹಾತ್ಮಕ ಕ್ಷಿಪಣಿ ಪಡೆಗಳು ಹಾಗೂ ನೌಕಾ ಪಡೆಯ ಬಲ ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.

Advertisement

ಬೃಹತ್‌ ಸೇನೆಯನ್ನು ಪುನಾರಚಿಸುವುದು ಹಾಗೂ ಇತರ ಸೇವೆಗಳಿಗೂ ಸಮ ಪ್ರಮಾಣದ ಬಲ ನೀಡುವ ಉದ್ದೇಶದಿಂದ ಯೋಧರ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸುತ್ತಿರುವುದಾಗಿ ಪೀಪಲ್ಸ್‌ ಲಿಬೆರೇಷನ್‌ ಆರ್ಮಿಯ ಅಧಿಕೃತ ಪತ್ರಿಕೆ ‘ಪಿಎಲ್‌ಎ ಡೈಲಿ,’ ವರದಿ ಮಾಡಿದೆ. ‘ಚೀನಾದ ವ್ಯೂಹಾತ್ಮಕ ಗುರಿಗಳು ಹಾಗೂ ರಕ್ಷಣಾ ಅಗತ್ಯಗಳಿಗೆ ಅನುಗುಣವಾಗಿ ಈ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಪಿಎಲ್‌ಎ ಕೇವಲ ಭೂ ಯುದ್ಧ ಹಾಗೂ ದೇಶದ ಸುರಕ್ಷತೆಗೆ ಮೀಸಲಾಗಿತ್ತು. ಈಗ ಸೇನೆಯ ಕಾರ್ಯವಿಧಾನದಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಲಾಗುತ್ತಿದೆ,’ ಎಂದು ಪತ್ರಿಕೆ ಹೇಳಿದೆ.

ಹಿಂದಿನಂತಲ್ಲ: ವಾಸ್ತವಿಕ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ ಈ ಬಾರಿ ಸಿಕ್ಕಿಂ ನಿಲುವು ‘ಭಿನ್ನ’ವಾಗಿರಲಿದೆ ಎಂದು ಚೀನಾ ಹೇಳಿದೆ. ಈ ಹಿಂದಿನ ಎಲ್ಲ ಗಡಿ ತಕರಾರುಗಳ ವೇಳೆ ಸಿಕ್ಕಿಂ ತಳೆದಿದ್ದ ನಿಲುವುಗಳಿಗೆ ಹೋಲಿಸಿದರೆ, ಈ ಬಾರಿ ಅದು ಗಡಿ ರೇಖೆಯ ನಿಯಮಗಳ ವ್ಯಾಪ್ತಿಯಲ್ಲೇ ನಿಲ್ಲಲಿದೆ ಎಂದು  ಚೀನಾ ವಿದೇಶಾಂಗ ಕಚೇರಿಯ ವಕ್ತಾರ ಗೆಂಗ್‌ ಶುವಾಂಗ್‌ ಹೇಳಿದ್ದಾರೆ. ಹಾಗೇ ಭಾರತ ನಿಗದಿತ ಗಡಿ ರೇಖೆ ಬಳಿ ಸಾಕಷ್ಟು ಬಾರಿ ಅಕ್ರಮವಾಗಿ ಸೇನೆ ಜಮಾವಣೆ ಮಾಡಿದೆ ಎಂದು ಗೆಂಗ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next