ಹೊಸದಿಲ್ಲಿ: ಕಳೆದ ಜೂನ್ ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಸೇನೆಗಾದ ಹಾನಿಗಿಂತ ಕಡಿಮೆ ಪ್ರಮಾಣದ ಹಾನಿ ಚೀನಿ ಸೇನೆಗಾಗಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ.
ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ. ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಚೀನಾಗೆ ಹೆಚ್ಚಿನ ಹಾನಿಯಾಗಿದೆ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಅದು ತಿರಸ್ಕರಿಸಿದೆ.
ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗ್ಲೋಬಲ್ ಟೈಮ್ಸ್ ಮುಖ್ಯ ಸಂಪಾದಕ , ”ನನಗೆ ತಿಳಿದಿರುವಂತೆ ಗಾಲ್ವಾನ್ ಸಂಘರ್ಷದಲ್ಲಿ ಭಾರತಕ್ಕಿಂತ ಕಡಿಮೆ ಹಾನಿ ಚೀನಾ ಪಡೆಗಾಗಿದೆ. ಭಾರತೀಯ ಸೇನೆಯು ಚೀನಾದ ಯಾವುದೇ ಸೈನಿಕರನ್ನು ಬಂಧಿಸಿಲ್ಲ. ಆದರೆ ಚೀನಾ ಪಡೆ ಕೆಲವು ಭಾರತೀಯ ಸೈನಿಕರನ್ನು ಅಂದು ವಶಕ್ಕೆ ಪಡೆದಿತ್ತು” ಎಂದಿದ್ದಾರೆ.
ಇದನ್ನೂ ಓದಿ: ಅಭಿಮತ: ಈಗ ಪಾಕಿಸ್ಥಾನದ ನಂಬರ್ 1 ಶತ್ರುರಾಷ್ಟ್ರ ಇಸ್ರೇಲ್!
ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಪಡೆಯಲ್ಲೂ ಸಾವು ನೋವುಗಳಾಗಿದೆ. ಆದರೆ ಆ ದೇಶದ ಕಡೆಯಿಂದ ಇದುವರೆಗೆ ಸಾವು ನೋವಿನ ನಿಖರ ಅಂಕಿ ಅಂಶ ನೀಡಲಾಗಿಲ್ಲ.