Advertisement

ಭಾರತೀಯರ ಕೈಲಾಸ ಮಾನಸ ಸರೋವರ ಯಾತ್ರೆಗೆ ಚೀನಾದಿಂದ ತಡೆ

06:08 PM Jun 26, 2017 | Sharanya Alva |

ಬೀಜಿಂಗ್: ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಾರ್ಥಿಗಳನ್ನು ಚೀನಾ ವಾಪಸ್ ಕಳುಹಿಸಿದ್ದು, ಯಾವ ಕಾರಣದಿಂದ ಯಾತ್ರೆಗೆ ತಡೆ ನೀಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ವಿದೇಶಾಂಗ ಸಚಿವಾಲಯ ಸಂಪರ್ಕದಲ್ಲಿ ಇದ್ದಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

Advertisement

ಮಾನಸ ಸರೋವರ ಯಾತ್ರಾರ್ಥಿಗಳನ್ನು ತಡೆದಿರುವ ವಿಷಯದ ಕುರಿತು ಭಾರತ ಮತ್ತು ಚೀನಾದ ವಿದೇಶಾಂಗ ಸಚಿವಾಲಯ ಪರಸ್ಪರ ಸಂಪರ್ಕದಲ್ಲಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಜೆಂಗ್ ಶುವಾಂಗ್ ತಿಳಿಸಿದ್ದಾರೆ.

ಕಳೆದ ವಾರ ಮಾನಸ ಸರೋವರ ಯಾತ್ರೆಗಾಗಿ ತೆರಳಿದ್ದ 47 ಮಂದಿ ಭಾರತೀಯರನ್ನು ಚೀನಾ ಅಧಿಕಾರಿಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ತಡೆದು ನಿಲ್ಲಿಸಿತ್ತು.  ಸಿಕ್ಕಿಂನ ನಾಥು ಲಾ ಪಾಸ್ ನಿಂದ ಮಾನಸ ಸರೋವರದತ್ತ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಕೆಲವು ತೊಂದರೆಗಳಿದ್ದವು. ಅದಕ್ಕಾಗಿ ಚೀನಾದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಭಾರತ ಶುಕ್ರವಾರ ಪ್ರತಿಕ್ರಿಯೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next