Advertisement

Pneumonia: ಕೋವಿಡ್‌ 19 ಆಯ್ತು…ಈಗ ನಿಗೂಢ ನ್ಯೂಮೋನಿಯಾ ಸೋಂಕಿನಿಂದ ಚೀನಾ ತತ್ತರ

12:50 PM Nov 23, 2023 | Team Udayavani |

ಬೀಜಿಂಗ್:‌ ಕೋವಿಡ್‌ 19 ಸೋಂಕಿನಿಂದ ದಿಗಿಲು ಹುಟ್ಟಿಸಿದ್ದ ಚೀನಾದಲ್ಲಿ ಈಗ ನಿಗೂಢ ನ್ಯೂಮೋನಿಯಾ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಚೀನಾದ ಆಸ್ಪತ್ರೆಗಳು ಸಾವಿರಾರು ಮಕ್ಕಳು ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Shocking: 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಸರಕಾರಿ ಶಾಲೆಯ ಪ್ರಾಂಶುಪಾಲ ಅರೆಸ್ಟ್

ಚೀನಾದ ಆಸ್ಪತ್ರೆಗಳು ಸೋಂಕು ಪೀಡಿತ ಮಕ್ಕಳಿಂದ ತುಂಬಿ ಹೋಗಿರುವುದು ಕಳವಳಕಾರಿಯಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಬೀಜಿಂಗ್‌ ಮತ್ತು ಲಿಯೋನಿಂಗ್‌ ಪ್ರಾಂತ್ಯದಲ್ಲಿ ಈ ನಿಗೂಢ ನ್ಯೂಮೋನಿಯಾ ಸೋಂಕು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದು, ಮಕ್ಕಳ ಆಸ್ಪತ್ರೆಗಳು ಅನಾರೋಗ್ಯ ಪೀಡಿತ ಮಕ್ಕಳಿಂದ ತುಂಬಿ ಹೋಗಿರುವುದಾಗಿ ವರದಿ ವಿವರಿಸಿದೆ.

ಪರಿಸ್ಥಿತಿ ತೀವ್ರವಾದ ಪರಿಣಾಮ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡಾ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸದ್ಯದ ಸ್ಥಿತಿ ಕೋವಿಡ್‌ 19 ಕಾಲಘಟ್ಟವನ್ನು ನೆನಪಿಸುವಂತಿದೆ ಎಂದು ವರದಿ ತಿಳಿಸಿದೆ.

ನಿಗೂಢ ನ್ಯೂಮೋನಿಯಾ ಪೀಡಿತ ಮಕ್ಕಳಲ್ಲಿ ವಿಪರೀತ ಜ್ವರ ಹಾಗೂ ಶ್ವಾಸಕೋಶದ ತೊಂದರೆ ಪತ್ತೆಯಾಗಿದೆ. ಆದರೆ ಯಾವುದೇ ಶೀತ, ಕೆಮ್ಮದ ಲಕ್ಷಣಗಳಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ಸಾವಿರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳಿಗೆ ಯಾವುದೇ ಶೀತ ಅಥವಾ ಇತರ ಯಾವ ಲಕ್ಷಣಗಳು ಕಂಡು ಬಂದಿಲ್ಲ. ವಿಪರೀತ ಜ್ವರ ಕಂಡು ಬಂದಿರುವುದಾಗಿ ಬೀಜಿಂಗ್‌ ನಿವಾಸಿಗಳು ತೈವಾನ್‌ ನ್ಯೂಸ್‌ ವೆಬ್‌ ಸೈಟ್‌ ಎಫ್‌ ಟಿವಿ ನ್ಯೂಸ್‌ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next