Advertisement

ಜನವರಿ ನಂತರ, ಮೊದಲ ಬಾರಿಗೆ ಚೀನಾದಲ್ಲಿ ಸೋಂಕಿನಿಂದ ಯಾರೂ ಮೃತರಾಗಿಲ್ಲ: ವರದಿ

10:34 AM Apr 08, 2020 | Mithun PG |

ಬೀಜಿಂಗ್: ಜಗತ್ತಿನೆಲ್ಲೆಡೆ ಕೋವಿಡ್-19 ವೈರಸ್ ಹರಡಲು ಕಾರಣವಾದ ಚೀನಾದಲ್ಲಿ ಜನವರಿ ನಂತರ ಇದೇ ಮೊದಲ ಬಾರಿಗೆ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ. ಮಂಗಳವಾರ ದೇಶದಲ್ಲಿ ಸೋಂಕಿನಿಂದ ಯಾರೂ ಕೂಡ ಮೃತರಾಗಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಜನವರಿಯಿಂದ ನಿರಂತರವಾಗಿ ಚೀನಾದಲ್ಲಿ ಸಾವಿನ ಸಂಖ್ಯೆ ಏರು ಗತಿಯಲ್ಲಿ ಸಾಗಿದ್ದವು. ಆದರೆ ಮಾರ್ಚ್ ನಿಂದ ಇದರ ಪ್ರಮಾಣ ಇಳಿಮುಖವಾಗಿತ್ತು.  ಮಂಗಳವಾರ ಇದೇ ಮೊದಲ ಬಾರಿಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೇ 32 ಹೊಸ ಸೋಂಕಿತರು ಮಂಗಳವಾರ ಪತ್ತೆಯಾಗಿದ್ದಾರೆ.

ಆದರೇ ಚೀನಾದಲ್ಲಿ ಎರಡನೇ ಬಾರಿಗೆ ಕೋವಿಡ್-19 ತನ್ನ ಪ್ರತಾಪವನ್ನು ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿದ್ದು, ವಿದೇಶಗಳಿಂದ ಚೀನಾಕ್ಕೆ ಹಿಂದಿರುಗುತ್ತಿರುವವರಿಂದ ವೈರಸ್ ಹರಡುತ್ತಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಹೊಸ ಸೋಂಕಿತ ಪ್ರಮಾಣ 1000 ದ ಗಡಿ ದಾಟಿದೆ ಎಂದು ಇದೇ ವೇಳೆ ತಿಳಿಸಲಾಗಿದೆ.

ಚೀನಾದಲ್ಲಿ ಇವರೆಗೂ 3,331 ಜನರು ಈ ಮಾರಣಾಂತಿಕ ವೈರಸ್ ಗೆ ಬಲಿಯಾಗಿದ್ದು, 81,740 ಜನರು ಸೋಂಕಿಗೆ ತುತ್ತಾಗಿದ್ದಾರೆ. ಈ ವೈರಸ್ ಮೊದಲ ಬಾರಿಗೆ  ಕಂಡುಬಂದ ವುಹಾನ್ ಪ್ರಾಂತ್ಯದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

Advertisement

Udayavani is now on Telegram. Click here to join our channel and stay updated with the latest news.

Next