Advertisement

ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮ ಬದಲಾವಣೆಗೆ ಚೀನಾ ಆಕ್ಷೇಪ

10:02 AM Apr 22, 2020 | Hari Prasad |

ಹೊಸದಿಲ್ಲಿ: ಇತ್ತೀಚೆಗೆ, ತನ್ನ ವಿದೇಶ ನೇರ ಬಂಡವಾಳ ಹೂಡಿಕೆ (FDI) ನಿಯಮಗಳನ್ನು ಬದಲಿಸಿರುವ ಭಾರತದ ಕ್ರಮವನ್ನು ಚೀನಾ ಖಂಡಿಸಿದೆ.

Advertisement

‘ಭಾರತದ ಭೂ ಗಡಿಗೆ ಹೊಂದಿಕೊಂಡಿರುವ ಯಾವುದೇ ನೆರೆ ದೇಶದ ಉದ್ಯಮಿ ಅಥವಾ ಕಂಪೆನಿ, ಭಾರತದಲ್ಲಿ ನೇರವಾಗಿ ಬಂಡವಾಳ ಹೂಡಿಕೆ ಮಾಡುವ ಹಾಗಿಲ್ಲ. ಅಂಥ ಹೂಡಿಕೆಗಳಿಗೆ ಕೇಂದ್ರ ಸರಕಾರದ ಅನುಮತಿ ಕಡ್ಡಾಯ’ ಎಂಬ ನಿಯಮವನ್ನು ಕೇಂದ್ರ ಸರಕಾರ ಜಾರಿಗೆ ತಂದಿತ್ತು.

ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಚೀನಾ, ‘ಭಾರತದ ಈ ಕ್ರಮ ತಾರತಮ್ಯ ಧೋರಣೆಯಿಂದ ಕೂಡಿರುವಂಥದ್ದು. ಅಲ್ಲದೆ, ಇದು ಡಬ್ಲ್ಯುಟಿಒ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುವಂಥದ್ದಾಗಿದೆ. ಭಾರತ ಆದಷ್ಟು ಬೇಗನೇ ಈ ನಿಯಮಗಳನ್ನು ಹಿಂಪಡೆಯುವುದೆಂದು ಆಶಿಸುತ್ತೇವೆ’ ಎಂದು ಚೀನಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next