Advertisement

ವುಹಾನ್‌ ಪಿ-4 ಲ್ಯಾಬ್‌ನ ಒಳಾಂಗಣ ಚಿತ್ರಗಳು ಔಟ್‌

05:05 PM Jul 12, 2020 | sudhir |

ಬೀಜಿಂಗ್‌: ಕೋವಿಡ್‌-19 ವೈರಸ್‌ ಹುಟ್ಟಿಗೆ ಕಾರಣವಾಗಿ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನ ಕೊನೆಗೂ ವುಹಾನ್‌ ಲ್ಯಾಬ್‌ನ ಕೆಲವೇ ಚಿತ್ರಗಳನ್ನು ಬಿಡುಗಡೆ ಮಾಡಿದೆ.

Advertisement

ಕೋವಿಡ್ ವೈರಸ್‌ ಸೃಷ್ಟಿಸಲಾಗಿದೆ ಎಂದು ಹೇಳಲಾದ ವುಹಾನ್‌ ಲ್ಯಾಬ್‌ ಚಿತ್ರಗಳನ್ನು ಚೀನ ಸರಕಾರದ ವಾಹಿನಿ ಸಿಸಿಟಿವಿ ಬಿಡುಗಡೆ ಮಾಡಿದೆ.

ವುಹಾನ್‌ನ ಪಿ-4 ಲ್ಯಾಬ್‌ನ ಸಂಕ್ಷಿಪ್ತ ಮಾಹಿತಿಯನ್ನು ಅಂತಾರಾಷ್ಟಿ¤àಯ ಮಾಧ್ಯಮ ಸಿಸಿಟಿವಿ ವಾಹಿನಿ ನೀಡಿದೆ. ಆದರೆ ಲ್ಯಾಬ್‌ನಲ್ಲಿ ಯಾವೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾತ್ರ ಚೀನ ಸರಕಾರ ಮೌನವಾಗಿದೆ.
2017ರಲ್ಲಿ ಈ ಲ್ಯಾಬ್‌ ಆರಂಭಗೊಂಡಿದ್ದು, ಅಂದಿನಿಂದಲೇ ಇಲ್ಲಿ ಅತಿ ಭಯಾನಕವಾದ ಕ್ಲಾಸ್‌-4 ವೈರಾಣುಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಕೋವಿಡ್‌-19 ವೈರಸ್‌ ಹುಟ್ಟಿಗೆ ಕಾರಣಗಳನ್ನು ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಎರಡು ತಂಡಗಳು ಈಗಾಗಲೇ ರಾಜಧಾನಿ ಬೀಜಿಂಗ್‌ಗೆ ತೆರಳಿದ್ದು, ಮುಂದಿನ ಎರಡು ದಿನಗಳ ಕಾಲ ವೈರಸ್‌ ಹರಡುವಿಕೆಯ ಬಗ್ಗೆ ಸಂಶೋಧನೆ ನಡೆಯಲಿದೆ.
ಪ್ರಾಣಿಯಿಂದ ಮಾನವರಿಗೆ ಸೋಂಕು ಹೇಗೆ ಹರಡಿತು ಎಂಬುದರ ಕುರಿತಾಗಿ ವೈದ್ಯಕೀಯ ತಜ್ಞರು ಹಾಗೂ ಸಾಂಕ್ರಾಮಿಕ ರೋಗ ತಜ್ಞರು ಅಧ್ಯಯನ ನಡೆಸಲಿದ್ದಾರೆ.

ಮೇ ತಿಂಗಳಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ವಿಶ್ವದ 120 ರಾಷ್ಟ್ರಗಳು, ವೈರಸ್‌ ಹುಟ್ಟಿನ ಮೂಲವನ್ನು ಶೋಧಿಸಬೇಕೆಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next