Advertisement
ಈ ಘಟನೆ ನಡೆದಿರುವುದು ಚೀನಾದ ಯೋಂಗ್‌ಕಾಂಗ್ ನಗರದಲ್ಲಿ. ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ ಇದರಲ್ಲಿ ತನ್ನ ತಂದೆ ಧೀರ್ಘಕಾಲದಿಂದ ಹಲ್ಲುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಹಲ್ಲಿನಾಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರ ಬಳಿ ಚಿಕಿತ್ಸೆಗಾಗಿ ಕಳೆದ ತಿಂಗಳು ಆಗಸ್ಟ್ 14 ರಂದು ಯೋಂಗ್‌ಕಾಂಗ್ ನಲ್ಲಿರುವ ದಂತ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಹಲ್ಲುಗಳನ್ನು ತೆಗೆಯಬೇಕಾಗುತ್ತದೆ ಅದರ ಬದಲಿಗೆ ಹೊಸ ಹಲ್ಲುಗಳನ್ನು ಇಡಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಮಾಡಿದ್ದಾಳೆ.
Related Articles
ಹಲ್ಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಎಲ್ಲಾ ಹಲ್ಲುಗಳನ್ನು ತೆಗೆಯಲು ವೈದ್ಯರು ಸಲಹೆ ನೀಡಿದ್ದಾರೆ ಅದರಂತೆ ವ್ಯಕ್ತಿ ಒಪ್ಪಿಗೆಯನ್ನೂ ನೀಡಿದ್ದಾರೆ ಅದರಂತೆ ಶಸ್ತಚಿಕಿತ್ಸೆಗೆ ತಯಾರಿ ನಡೆಸಿದ ವೈದ್ಯರು ಒಂದಾದ ಮೇಲೆ ಒಂದರಂತೆ ಒಂದೇ ದಿನ ಒಟ್ಟು 23 ಹಲ್ಲುಗಳನ್ನು ಕಿತ್ತು ಹಾಕಿದ್ದಾರೆ ಇದಾದ ಬಳಿಕ ಅದೇ ದಿನ ಹನ್ನೆರಡು ಹೊಸ ಹಲ್ಲುಗಳನ್ನು ಅಳವಡಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಮೊದಲು ಹಲ್ಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಈಗ ಹಲ್ಲು ತೆಗೆದ ನೋವಿನಿಂದ ಹೆಚ್ಚಿನ ನೋವು ಅನುಭವಿಸಬೇಕಾಯಿತು. ಆದರೆ ದಿನದಿಂದ ದಿನಕ್ಕೆ ಅವರ ನೋವು ಹೆಚ್ಚಾಗತೊಡಗಿತು ಚಿಕಿತ್ಸೆ ನಡೆದು ಹದಿಮೂರು ದಿನಕ್ಕೆ ಹೃದಯಾಘಾತಗೊಂಡು ವ್ಯಕ್ತಿ ಮೃತಪಟ್ಟಿದ್ದಾರೆ.
Advertisement
ವೈದ್ಯರ ಕಾರ್ಯಕ್ಕೆ ಆಕ್ರೋಶ ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ನೆಟ್ಟಿಗರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಒಂದೇ ದಿನ 23 ಹಲ್ಲುಗಳನ್ನು ಹೇಗೆ ತೆಗೆಯಲು ಸಾಧ್ಯ, ಪರಿಣತಿ ಹೊಂದಿದ ವೈದ್ಯರು ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ, ಇನ್ನೂ ಕೆಲವರು 23 ಹಲ್ಲುಗಳನ್ನು ಕಿತ್ತು ಹಾಕಿ ಅದೇ ದಿನ ಮತ್ತೆ ಹನ್ನೆರಡು ಹೊಸ ಹಲ್ಲು ಇಡುವ ವೈದ್ಯರನ್ನು ನಾನು ಇದುವರೆಗು ನೋಡಲಿಲ್ಲ ಇವರು ನಿಜವಾಗಿಯೂ ವೈದ್ಯರೇ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಪ್ಪು ಎಸಗಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚಿನ ಮಂದಿ ಆಗ್ರಹಿಸಿದ್ದಾರೆ. ಮಗಳ ದೂರಿನ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ವೈದ್ಯರು ತಪ್ಪು ಎಸಗಿರುವುದು ಹೌದು ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಇದನ್ನೂ ಓದಿ: Exams: ವಿದ್ಯಾರ್ಥಿಗಳೇ ಗಮನಿಸಿ… ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ