Advertisement
ನಂಜನಗೂಡು ಔಷಧ ತಯಾರಿಕೆ ಕಂಪೆನಿಯ ಉದ್ಯೋಗಿಗೆ ಸೋಂಕು ತಗಲಿದ ಬಳಿಕ ಮತ್ತೆ ಕಂಪೆನಿಯ 9 ಮಂದಿಗೆ ಸೋಂಕು ಹರಡಿದೆ. ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಕೊರೊನಾ ಪರೀಕ್ಷಾ ಕಿಟ್‌ಗಳನ್ನು ಐಐಎಸ್‌ಸಿ ಅಭಿವೃದ್ಧಿ ಪಡಿಸಿದ್ದು, ಅನುಮೋದನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದ್ದು, ಒಪ್ಪಿಗೆ ಬಳಿಕ ಸರಕಾರ ಪರೀಕ್ಷಾ ಕಿಟ್‌ಗಳ ಖರೀದಿಸಲಿದೆ ಎಂದರು. ಶೀಘ್ರವೇ ವೆಂಟಿಲೇಟರ್
ಸರಕಾರ 1,000 ವೆಂಟಿಲೇಟರ್ ಖರೀದಿಗೆ ಚಿಂತಿಸಿದ್ದು, 471 ವೆಂಟಿಲೇಟರ್‌ಗಾಗಿ ಆರ್ಡರ್ ಮಾಡಿದ್ದೇವೆ. ಈಗಾಗಲೇ 9 ವೆಂಟಿಲೇಟರ್‌ಗಳು ಬಂದಿದ್ದು ಅಳವಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.