Advertisement

ವಾರಕ್ಕೆ ಮೂರೇ ಗಂಟೆ ವಿಡಿಯೋಗೇಮ್‌

08:55 PM Aug 30, 2021 | Team Udayavani |

ಬೀಜಿಂಗ್‌: ಯುವ ಪೀಳಿಗೆಯು ವಿಡಿಯೋ ಗೇಮ್‌ಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ಚೀನಾ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ.

Advertisement

ಅದರ ಪ್ರಕಾರ, ವಾರದಲ್ಲಿ ಕೇವಲ ಮೂರು ಗಂಟೆ ಮಾತ್ರ ವಿಡಿಯೋ ಗೇಮ್‌ ಆಡಬೇಕು. ಮೂರು ಗಂಟೆ ಮೀರಿದ ಆಟಕ್ಕೆ ಅನುಮತಿಯಿಲ್ಲ ಎಂಬ ಆದೇಶ ಹೊರಡಿಸಿದೆ.

ಅದರಂತೆ, ಪ್ರತಿ ಭಾನುವಾರ, ಶುಕ್ರವಾರ, ಶನಿವಾರಗಳಂದು ರಾತ್ರಿ 8ರಿಂದ 9ರವರೆಗೆ ಮಾತ್ರ ವಿಡಿಯೋ ಗೇಮ್‌ಗಳನ್ನು ಆಡಲು ಅವಕಾಶ ಸಿಗಲಿದೆ. ಇನ್ನು, ಸಾರ್ವತ್ರಿಕ ರಜಾದಿನಗಳಲ್ಲಿ ಹೆಚ್ಚುವರಿಯಾಗಿ ಒಂದು ಗಂಟೆ ಆಡಲು ಸಿಗಲಿದೆ. ಇಂದಿನ ಹದಿಹರೆಯದವರು ನಮ್ಮ ದೇಶದ ಭಾವಿ ಪ್ರಜೆಗಳು. ದೇಶದ ಭವಿಷ್ಯದ ದೃಷ್ಟಿಯಿಂದ ವಿಡಿಯೋ ಗೇಮ್‌ಗಳಿಗೆ ನಿಯಂತ್ರಣ ಹೇರಲಾಗಿದೆ ಎಂದು ಚೀನಾ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next