Advertisement
ಭಾರತದ ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಚೀನ ತನ್ನ ಸೇನಾನೆಲೆ ಸ್ಥಾಪಿಸುತ್ತಿದೆ. ಇದರ ಮೂಲಕ ಭಾರತದ ಮೇಲೆ ಸನಿಹದಿಂದ ಕಣ್ಗಾವಲಿಡಲು ಹೊರಟಿದೆ.
Related Articles
ಸದ್ಯ ಮ್ಯಾನ್ಮಾರ್‌ರನ್ನು ಸೇನಾ ಜನರಲ್ ಮಿನ್ ಆಂಗ್ ಎಚ್‌ಲೈಂಗ್ ಮುನ್ನಡೆಸುತ್ತಿದ್ದಾರೆ. ಆಂಗ್ ಸಾನ್ ಸೂಕಿಯನ್ನು ಕಿತ್ತೆಸೆದು ಮತ್ತೆ ಸೇನಾಡಳಿತ ಸ್ಥಾಪಿಸಿದ್ದರಿಂದ ಮ್ಯಾನ್ಮಾರ್ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಕಳೆದುಕೊಂಡಿದೆ. ಈ ಹಂತದಲ್ಲಿ ಚೀನ ಈ ದೇಶಕ್ಕೆ ಸಾವಿರಾರು ಕೋಟಿ ರೂ. ನೆರವು ನೀಡಿದೆ. ಅದನ್ನೇ ಬಳಸಿಕೊಂಡು ಕೊಕೊ ದ್ವೀಪದಲ್ಲಿ ಯುದ್ಧವಿಮಾನ ಸಂಚಾರಕ್ಕೆ ನೆರವಾಗಬಲ್ಲ ಒಂದು ರನ್‌ವೇ, ಬ್ಯಾರಕ್‌ಗಳು, ವಸತಿ ಕೇಂದ್ರ, ನಿಗಾಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಚೀನ ಪಾತ್ರವಿಲ್ಲ ಎಂದು ಮ್ಯಾನ್ಮಾರ್ ಹೇಳಿಕೊಂಡಿದ್ದರೂ, ಭಾರತದ ಗುಪ್ತಚರ ಇಲಾಖೆ ಆ ಪ್ರದೇಶದಲ್ಲಿ ಚೀನ ಯೋಧರ ಪ್ರಬಲ ಚಟುವಟಿಕೆಗಳಿಗೆ ಸಾಕ್ಷಿ ನೀಡಿದೆ!
Advertisement
ಕೊಕೊ ದ್ವೀಪದಿಂದ ಭಾರತದ ವಿಶಾಖಪಟ್ಟಣಂನಿಂದ 50 ಕಿ.ಮೀ. ದೂರದಲ್ಲಿರುವ ರಾಂಬಿಲ್ಲಿ ನೌಕಾನೆಲೆಯನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಹಾಗೆಯೇ ಒಡಿಶಾದ ಬಾಲಸೋರ್ ಮತ್ತು ಅಬ್ದುಲ್ ಕಲಾಂ ದ್ವೀಪದಲ್ಲಿರುವ ಅಣ್ವಸ್ತ್ರಸಜ್ಜಿತ, ಸಾಂಪ್ರದಾಯಿಕ ಕ್ಷಿಪಣಿ ಪರೀಕ್ಷಾ ಕೇಂದ್ರಗಳ ಮೇಲೂ ಚೀನ ನಿಗಾ ಇಡಬಲ್ಲದು! ಇದಕ್ಕೂ ಮಿಗಿಲಾಗಿ ಬಾಂಗ್ಲಾ-ಮ್ಯಾನ್ಮಾರ್-ಚೀನ ಕಾರಿಡಾರ್ ನಿರ್ಮಾಣಕ್ಕೆ ಬೀಜಿಂಗ್ ಹವಣಿಸುತ್ತಿದೆ. ಇವೆಲ್ಲ ಭಾರತಕ್ಕೆ ಆತಂಕ ಹುಟ್ಟಿಸಿದೆ.