Advertisement

ಜಪಾನ್‌ ಹಿಂದಿಕ್ಕಲು ಜಿಡಿಪಿ ತಿರುಚಿದ ಚೀನ: ರಶ್ಯ ಮಾಧ್ಯಮ ಆರೋಪ

10:39 AM Sep 05, 2018 | udayavani editorial |

ವಾಷಿಂಗ್ಟನ್‌ ಡಿಸಿ : 2010ರಲ್ಲಿ ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕ ದೇಶವಾಗಿದ್ದ ಜಪಾನ್‌ ನನ್ನು ಹಿಂದಿಕ್ಕಲು ಚೀನ ತನ್ನ ಜಿಡಿಪಿ ಅಂಕಿ ಅಂಶಗಳನ್ನು ತಿರುಚಿತ್ತು ಎಂದು  ರಶ್ಯನ್‌ ಮಾಧ್ಯಮಗಳು ಬಹಿರಂಗಪಡಿಸಿವೆ.

Advertisement

ಚೈನಾಸ್ಕೋಪ್‌ ಮೀಡಿಯ ರಿಸರ್ಚ್‌ ಕಂಪೆನಿಯು ರೇಡಿಯೋ ಫ್ರೀ ಏಶ್ಯ ದ ವರದಿಯೊಂದನ್ನು  ಪ್ರಕಟಿಸಿದದ್ದು  ಇದು ರಶ್ಯನ್‌ ದೈನಿಕ ಕೊಮರ್‌ಸ್ಯಾಂಟ್‌ ನಲ್ಲಿ ಕಾಣಿಸಕೊಂಡ ವಿಶ್ಲೇಷಣೆಯನ್ನು ಉಲ್ಲೇಖೀಸಿ ಚೀನದ ಜಿಡಿಪಿ ಕರಾಮತ್ತನ್ನು ಬಯಲು ಮಾಡಿದೆ. 

ಚೀನದ ಪ್ರಬಲ ಆಳುವ ವರ್ಗವು ತನ್ನ ಸ್ವಹಿತಾಸಕ್ತಿಗಾಗಿ ಜಿಡಿಪಿಯನ್ನು ತಿರುಚಿತ್ತು ಎಂದು “ದ ಡಿಸೆಪ್‌ಶನ್‌ ಆಫ್ ಡಿ ಜಿಡಿಪಿ’ ವಿಶ್ಲೇಷಣ ವರದಿಯನ್ನು ಉಲ್ಲೇಖೀಸಿ ಹೇಳಿದೆ. 

ಚೀನದಲ್ಲಿ ಉತ್ಪಾದನೇತರ ಆರ್ಥಿಕ ಚಟುವಟಿಕೆಯು ತೀವ್ರವಾಗಿದ್ದು ಇದರ ಪರಿಣಾಮವಾಗಿ ಜಿಡಿಪಿ ಆರಾಧಕ ಚೀನವು ತನ್ನ ಅಂಕಿ ಅಂಶಗಳನ್ನು ಕೃತ್ರಿಮವಾಗಿ ತಿರುಚಿದೆ ಎಂದು ಲೇಖನವು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next