Advertisement
21 ಪ್ರಾಂತ್ಯಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದ್ದು, ಡಲಿಯಾನ್ ನಗರದಲ್ಲಂತೂ ಸೋಂಕಿನ ಹರಡುವಿಕೆ ಪ್ರಮಾಣ ಅತ್ಯಂತ ಅಧಿಕವಿದೆ. 75 ಲಕ್ಷ ಜನಸಂಖ್ಯೆಯಿರುವ ಈ ನಗರದಲ್ಲಿ ನ.4ರಂದು ಮೊದಲ ಡೆಲ್ಟಾ ಪ್ರಕರಣ ದೃಢವಾಗಿತ್ತು. ಅದಾದ ನಂತರ ಪ್ರತಿದಿನ ಸರಾಸರಿ 24 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ದೇಶಾದ್ಯಂತ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡಲಾರಂಭಿಸಿದೆ.
ಡಲಿಯಾನ್‌ನ ಪ್ರಸಿದ್ಧ ಜುವಾಂಗ್ ವಿಶ್ವವಿದ್ಯಾಲಯದಲ್ಲಿ ಡೆಲ್ಟಾ ಆರ್ಭ ಟ ಹೆಚ್ಚಿದ್ದು, 1500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ವಿವಿಧ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲಿಂದಲೇ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.