Advertisement

ಲಡಾಖ್‌ ಸನಿಹ ಚೀನದ ಹೊಸ ವಾಯುನೆಲೆ

12:59 AM Jul 20, 2021 | Team Udayavani |

ಹೊಸದಿಲ್ಲಿ : ಭಾರತದ ಜತೆಗಿನ ವಾಸ್ತವ ನಿಯಂತ್ರಣ ರೇಖೆ ಯುದ್ದಕ್ಕೆ ಸಮರ ವಿಮಾನಗಳ ಕಾರ್ಯಾಚರಣೆಗೆ ಇರುವ ಅಡೆತಡೆಯನ್ನು ನಿವಾರಿಸುವುದಕ್ಕಾಗಿ ಚೀನವು ಅಲ್ಲಿ ಹೊಸ ವಾಯುನೆಲೆಯೊಂದನ್ನು ನಿರ್ಮಿಸುತ್ತಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.

Advertisement

ಪೂರ್ವ ಲಡಾಖ್‌ ಸನಿಹದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯಕ್ಕೆ ಸೇರಿದ ಶಾಕೆಯಲ್ಲಿ ವಾಯುನೆಲೆ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಇದೇ ಭಾಗದ ಕಷ್ಗರ್ ಮತ್ತು ಹೋಗನ್‌ ಎಂಬಲ್ಲಿ ಚೀನದ ವಾಯುನೆಲೆಗಳಿವೆ. ಹೊಸ ನೆಲೆ ಇವೆರಡರ ನಡುವೆ ಬರಲಿದೆ.

ಇದಲ್ಲದೆ ಉತ್ತರಾ ಖಂಡದ ಬಾರಾಹೋತಿ ಎಂಬಲ್ಲಿ ಗಡಿಯ ಸನಿಹ ಇನ್ನೊಂದು ವಾಯುನೆಲೆ ಇದ್ದು, ಅಲ್ಲಿ ಚೀನವು ಭಾರೀ ಸಂಖ್ಯೆಯಲ್ಲಿ ಡ್ರೋನ್‌ಗಳನ್ನು ಇರಿಸಿದೆ. ಈ ಭಾಗದಲ್ಲಿ ಅವುಗಳ ಹಾರಾಟ ಹೆಚ್ಚಿದ್ದು, ಭಾರತ ಈ ಬಗ್ಗೆ ಹದ್ದುಗಣ್ಣು ಇರಿಸಿದೆ ಎಂಬು ದಾಗಿಯೂ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next