Advertisement

ಬ್ರಹ್ಮಪುತ್ರ ನೀರಿಗೆ ಸುರಂಗ ಯೋಜನೆ ಮಾಹಿತಿ ಇಲ್ಲ

12:20 PM Nov 02, 2017 | Team Udayavani |

ಬೀಜಿಂಗ್‌: ಒಂದು ಸಾವಿರ ಕಿಮೀ ವ್ಯಾಪ್ತಿಯ ಭೂಮಿಯ ಕೆಳಭಾಗದಲ್ಲಿ ಸುರಂಗ ತೋಡಿ ಬ್ರಹ್ಮಪುತ್ರಾ ನದಿ ನೀರು ಹರಿಸುವ ಯೋಜನೆ ಬಗ್ಗೆ ಮಾಹಿತಿ ಇಲ್ಲ. ಹೀಗೆಂದು ಚೀನಾ ಸರ್ಕಾರದ ನೀರಾವರಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಒಬ್ಬರು ಹೇಳಿಕೊಂಡಿದ್ದಾರೆ.

Advertisement

ಇದೇ ಮಾದರಿಯ ವದಂತಿಗಳು ಈ ಹಿಂದೆ ಕೂಡ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಹೀಗಾಗಿ ಅದಕ್ಕೆ ಹೆಚ್ಚಿನ ಮಹತ್ವ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಂಗಳವಾರ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಕೂಡ ಈ ಮಾಹಿತಿಯನ್ನು ತಿರಸ್ಕರಿಸಿದ್ದರು. ಹಾಂಕಾಂಗ್‌ನಿಂದ ಪ್ರಕಟವಾಗುವ “ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ಪತ್ರಿಕೆಯಲ್ಲಿ ಸೋಮವಾರ ಈ ಬಗ್ಗೆ ವರದಿ ಪ್ರಕಟಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next