ಹೊಸದಿಲ್ಲಿ: ಪೂರ್ವ ಲಡಾಖ್ ನ ಚೊಶುಲ್ ಗಡಿಯಲ್ಲಿ ಶುಕ್ರವಾರ ಭಾರತೀಯ ಸೈನಿಕರಿಂದ ಬಂಧಿಸಲ್ಪಟ್ಟ ತನ್ನ ಸೈನಿಕನನ್ನು ಭಾರತ ಬಿಡುಗಡೆಗೊಳಿಸಬೇಕು ಎಂದು ಚೀನಾ ಕೇಳಿಕೊಂಡಿದೆ.
ಕ್ಲಿಷ್ಟ ಭೌಗೋಳಿಕ ಪ್ರದೇಶ ಮತ್ತು ಕತ್ತಲಿನ ಕಾರಣ ಸೈನಿಕ ಗಡಿ ದಾಟಿ ಹೋಗಿದ್ದಾನೆ ಎಂದು ಚೀನಾದ ಮಿಲಿಟರಿ ಪತ್ರಿಕೆ ಹೇಳಿಕೊಂಡಿದೆ. ಹಿರಿಯ ಅಧಿಕಾರಿಗಳು ಒಪ್ಪಿಗೆಯ ನಂತರ ಸೈನಿಕನನ್ನು ಮರಳಿಸುತ್ತೇವೆ ಎಂದು ಭಾರತ ಹೇಳಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಭಾರತೀಯ ಅಧಿಕಾರಿಗಳು ಸೈನಿಕನನ್ನು ಮತ್ತೆ ಚೀನಾಕ್ಕೆ ವರ್ಗಾಯಿಸಬೇಕು ಮತ್ತು ಗಡಿ ಪ್ರದೇಶದಲ್ಲಿ ಜಂಟಿಯಾಗಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು ಎಂದು ಮಿಲಿಟರಿ ಪತ್ರಿಕೆ ಹೇಳಿಕೊಂಡಿದೆ.
ಭಾರತೀಯ ಸೇನೆಯು ಶನಿವಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ, ಶುಕ್ರವಾರ ಮುಂಜಾನೆ ಭಾರತದ ಪ್ರದೇಶದಲ್ಲಿ ಚೀನಾ ಸೈನಿಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚೀನಾ ಯೋಧ ಸೇನೆಯ ಕಸ್ಟಡಿಯಲ್ಲಿದ್ದು, ಕಾಯ್ದೆಯಂತೆ ಚೀನಾ ಯೋಧ ತನಿಖೆಗೆ ಸಹಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದ ಸಿಗ್ನಲ್! ವಾಟ್ಸಪ್‌ಗೆ ಉತ್ತಮ ಪರ್ಯಾಯ ಸಿಗ್ನಲ್ ಆ್ಯಪ್
2020ರ ಅಕ್ಟೋಬರ್ ನಲ್ಲಿ ಭಾರತೀಯ ಸೇನೆ ಲಡಾಖ್ ನ ಡೆಮ್ ಚೋಕ್ ಪ್ರದೇಶದ ಸಮೀಪ ಚೀನಾ ಸೈನಿಕ ವಾಂಗ್ ಯಾ ಲಾಂಗ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿತ್ತು. ವಿಚಾರಣೆಗೆ ಒಳಪಡಿಸಿದ ನಂತರ ಅಕ್ಟೋಬರ್ 21ರಂದು ವಾಂಗ್ ನನ್ನು ವಾಪಸ್ ಕಳುಹಿಸಲಾಗಿತ್ತು.