Advertisement

ಚೀನ ಮಹಾಗೋಡೆ ಅಡಿ ರೈಲು ಸುರಂಗ!

09:45 AM Aug 02, 2017 | Team Udayavani |

ಬೀಜಿಂಗ್‌: ರೈಲ್ವೇ ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿರುವ ಚಿನ ಇದೀಗ ವಿಶ್ವವಿಖ್ಯಾತ ಮಹಾಗೋಡೆ ಅಡಿ ರೈಲು ಸುರಂಗವನ್ನು ಕೊರೆಯಲು ಮುಂದಾಗಿದೆ. 2022ರಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಸಿದ್ಧತೆಯಾಗಿ ಚೀನ ಮಹಾಗೋಡೆಯ ಅಡಿ ಒಂದು ಭಾಗದಲ್ಲಿ 12 ಕಿ.ಮೀ. ಉದ್ದಕೆ ಸುರಂಗ ಕೊರೆದು ಝಾಂಗ್‌ಜಿಯಾಕು ನಗರವನ್ನು ಸಂಪರ್ಕಿಸುವ ಯೋಜನೆ ಇದಾಗಿದೆ.

Advertisement

ಇದರೊಂದಿಗೆ ಮಹಾಗೋಡೆ ಅಡಿ 102 ಮೀ. ಆಳದಲ್ಲಿ ಒಂದು ರೈಲ್ವೇ ಸ್ಟೇಷನ್‌ ಕೂಡ ನಿರ್ಮಾಣವಾಗಲಿದೆ. ಈ ಸುರಂಗದಲ್ಲಿ ಗಂಟೆಗೆ 350 ಕಿ.ಮೀ.ವೇಗದಲ್ಲಿ ರೈಲುಗಳು ಸಂಚರಿಸಲಿದ್ದು, ಬೀಜಿಂಗ್‌-ಝಾಂಗ್‌ಜಿಯಾಕು ನಗರವನ್ನು ಈಗಿನ ಮೂರು ಗಂಟೆ ಬದಲಿಗೆ ಕೇವಲ 1 ಗಂಟೆಯಲ್ಲಿ ಸಂಪರ್ಕಿಸಲಿದೆ. 2019ರಲ್ಲಿ ಮಹಾಗೋಡೆ ಅಡಿಯ ಸುರಂಗ ಕೆಲಸ ಸಂಪೂರ್ಣವಾಗಲಿದೆ. ಸುರಂಗದ ಆಳ 4 ಮೀ. ನಿಂದ 432 ಮೀ. ವರೆಗೆ ಇರಲಿದೆ. ಚೀನ ರೈಲ್ವೇ ನಂ.5 ಎಂಜಿನಿಯರಿಂಗ್‌ ಗ್ರೂಪ್‌ ಸುರಂಗದ ಕೆಲಸ ನಡೆಸುತ್ತಿದೆ. ಸುರಂಗ ಕೊರೆತ, ಸ್ಫೋಟದ ವೇಳೆ ಮಹಾಗೋಡೆಗೆ ಹಾನಿಯಾಗದಂತೆ ಅತ್ಯಾಧುನಿಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಸುರಂಗ ನಿರ್ಮಾಣ ಮಾಡುವುದರಿಂದ ಇಲ್ಲಿನ ಪರಿಸರಕ್ಕೆ ಹಾನಿಯಾಗುತ್ತದೆ. ಆದರೆ ಮಹಾಗೋಡೆ ಉಳಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next