Advertisement

ಭಾರತ ಗಡಿಯಲ್ಲಿ ಪಾಕಿಗೆ ಚೀನದಿಂದ ಬಂಕರ್‌, ಮೂಲ ಸೌಕರ್ಯ ನಿರ್ಮಾಣ

07:09 PM Jan 06, 2018 | udayavani editorial |

ಹೊಸದಿಲ್ಲಿ : ಭಾರತದ ಗಡಿಗೆ ತಾಗಿಕೊಂಡ ಪಾಕ್‌ ನೆಲದಲ್ಲಿ ಚೀನ ಸೈನಿಕರ ಉಪಸ್ಥಿತಿ ಹೆಚ್ಚುತ್ತಿದೆ. ಅಂತೆಯೇ ಪಾಕಿಸ್ಥಾನ ಭಾರತದೊಂದಿಗಿನ ತನ್ನ ಗಡಿಯಲ್ಲಿ ತನ್ನ ಮಿಲಿಟರಿ ಮೂಲ ಸೌಕರ್ಯವನ್ನು ಆಧುನೀಕರಿಸಲು ಚೀನದ ನೆರವು ಪಡೆಯುತ್ತಿದೆ. ಚೀನ ಸೇನೆ ಈಗಾಗಲೇ ಪಾಕ್‌ ಸೇನೆಗಾಗಿ 350ಕ್ಕೂ ಹೆಚ್ಚು ಕಲ್ಲಿನ ಬಂಕರ್‌ಗಳನ್ನು ನಿರ್ಮಿಸಿಕೊಟ್ಟಿದೆ. ಮಾತ್ರವಲ್ಲದೆ ಚೀನ ಸೇನೆ ಪಾಕಿಸ್ಥಾನಕ್ಕೆ ಅನೇಕ ಗಡಿ ಹೊರಠಾಣೆಗಳನ್ನು ಮತ್ತು ರಸ್ತೆ ಜಾಲಗಳನ್ನು ನಿರ್ಮಿಸಿಕೊಡುತ್ತಿದೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. 

Advertisement

ಝೀ ಮೀಡಿಯಾ ಸಂಗ್ರಹಿಸಿರುವ ವಿಡಿಯೋ ದೃಶ್ಯಾವಳಿಗಳಲ್ಲಿ ಚೀನ ಸೇನೆ ಪಾಕ್‌ ಸೇನಗೆ 350ಕ್ಕೂ ಹೆಚ್ಚು ಕಲ್ಲಿನ ಬಂಕರ್‌ಗಳನ್ನು ಕಟ್ಟಿಸಿಕೊಟ್ಟಿರುವುದು ಕಂಡು ಬಂದಿದೆ. ಈ ನಿರ್ಮಾಣ ತಾಣಗಳು ಯಾರಿಗೂ ಗೊತ್ತಾಗದ ರೀತಿಯಲ್ಲಿ ಅವುಗಳ ಹೊರನೋಟವನ್ನು ಪಲ್ಲಟಿಸಲಾಗಿದೆ. 

ಈ ನಿರ್ಮಾಣ ಕಾಮಗಾರಿಗಳಯಾವುದೇ ವಿವರಗಳನ್ನು ಪಾಕ್‌ ಸರಕಾರ ಭಾರತಕ್ಕೆ ಔಪಚಾರಿಕವಾಗಿ ತಿಳಿಸಿಲ್ಲ. ಪಾಕ್‌ ಭದ್ರತಾ ಪಡೆಗಳು ಭಾರತ ಸೇನೆಯೊಂದಿಗೆ ಧ್ವಜ ಸಭೆಯಲ್ಲಿ 
ಆ ಕುರಿತ ಮಾಹಿತಿ ನೀಡುವುದು ಶಿಷ್ಟಾಚಾರವಾಗಿದೆ. 

ಪಾಕ್‌ ಸೇನೆ ತನ್ನ ಗಡಿಯಲ್ಲಿ ಚೀನ ಸೇನೆ ನೆರವಿನಿಂದ ರಸ್ತೆ ಜಾಲ, ಬಂಕರ್‌ಗಳು ಹಾಗೂ ಕಾಲುವೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಮೂಲ ಉದ್ದೇಶ ಭಾರತ ಯಾವುದೇ ಹೊತ್ತಿನಲ್ಲಿ ಕೈಗೊಳ್ಳಬಹುದಾದ ಸಾಂಪ್ರದಾಯಿಕ ಸಮರದ ವೇಳೆ ಅದರ ಸೇನೆಯನ್ನು ಹಿಮ್ಮೆಟ್ಟಿಸುವುದೇ ಆಗಿದೆ ಮಾತ್ರವಲ್ಲದೆ ಅದಕ್ಕೆ ಸಾಂಪ್ರದಾಯಿಕ ದಾಳಿ ಮಾರ್ಗಗಳು ಸಿಗದಂತೆ ಮಾಡುವುದು ಕೂಡ ಆಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next