Advertisement

ಭಾರತೀಯ ನೌಕಾಪಡೆಗೆ ಸೆಡ್ಡು: ಪಾಕಿಗೆ ಚೀನದ 8 ಜಲಾಂತರ್ಗಾಮಿ

04:22 PM Jul 16, 2018 | Team Udayavani |

ಬೀಜಿಂಗ್‌/ಇಸ್ಲಾಮಾಬಾದ್‌ : ಪಾಕಿಸ್ಥಾನದ ಸರ್ವ ಋತು ಮಿತ್ರನಾಗಿರುವ ಚೀನ, ಭಾರತೀಯ ನೌಕಾ ಪಡೆಗೆ ಸೆಡ್ಡು ಹೊಡೆಯಲು ಪಾಕಿಗೆ ನೆರವಾಗುವ ಉದ್ದೇಶದೊಂದಿಗೆ ಎಂಟು ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ.

Advertisement

ಭಾರತದ ಬಳಿ ಪ್ರಕೃತ 16 ಜಲಾಂತರ್ಗಾಮಿಗಳು ಇವೆಯಾದರೆ ಪಾಕಿಸ್ಥಾನದ ಬಳಿ 10 ಇವೆ. ಇನ್ನೂ ಎಂಟು ಜಲಾಂತರ್ಗಾಮಿಗಳನ್ನು ಪಾಕಿಸ್ಥಾನ ಹೊಂದಿದಲ್ಲಿ ಭಾರತೀಯ ನೌಕಾಪಡೆಯನ್ನು ಮೀರಿಸುವ ನೌಕಾ ಶಕ್ತಿ ಅದಕ್ಕೆ ಪ್ರಾಪ್ತವಾಗುವುದೆಂಬ ಲೆಕ್ಕಾಚಾರ ಚೀನದ್ದಾಗಿದೆ. ಇದರಿಂದ ಜಲಾಂತರ್ಗತ ಸಮರದಲ್ಲಿ ಪಾಕಿಸ್ಥಾನಕ್ಕೆ ಭಾರತೀಯ ನೌಕಾ ಪಡೆಯನ್ನು ಎದುರಿಸುವುದು ಸುಲಭವಾದೀತೆಂದು ಅದು ಭಾವಿಸಿದೆ. 

ಚೀನ ಪಾಕಿಸ್ಥಾನಕ್ಕಾಗಿ ಈಗಾಗಲೇ ಎರಡು ರಿಮೋಟ್‌ ಸೆನ್ಸಿಂಗ್‌ ಸೆಟಲೈಟ್‌ಗಳನ್ನು ಯಶಸ್ವಿಯಾಗಿ ಚಾಲನೆಗೊಳಿಸಿದೆ. ಇದರಿಂದಾಗಿ ಪಾಕಿಸ್ಥಾನಕ್ಕೆ 50 ಬಿಲಿಯ ಡಾಲರ್‌ ವೆಚ್ಚದಲ್ಲಿ ಮೈದಳೆಯುತ್ತಿರುವ ಪಾಕಿಸ್ಥಾನ್‌ ಇಕಾನಮಿಕ್‌ ಕಾರಿಡಾರ್‌ ಯೋಜನೆಯ ಪ್ರಗತಿಯ ಮೇಲೆ ವಿಚಕ್ಷಣೆ ನಡೆಸುವುದು ಸಾಧ್ಯವಾಗಿದೆ. 

2011ರ ಆಗಸ್ಟ್‌ನಲ್ಲಿ ಪಾಕ್‌ ಸ್ಯಾಟ್‌ 1ಆರ್‌ ಸಂಪರ್ಕ ಉಪಗ್ರಹವನ್ನು ಚಾಲನೆಗೊಳಿಸುವ ಮೂಲಕ ಚೀನ ಉಭಯ ದೇಶಗಳ ನಡುವಿನ ಬಾಹ್ಯಾಕಾಶ ಸಹಕಾರ ಅಧ್ಯಾಯವನ್ನು ಆರಂಭಿಸಿದ್ದು ಇದೀಗ ಈ ಎರಡು ರಿಮೋಟ್‌ ಸೆನ್ಸೆಂಗ್‌ ಸೆಟಲೈಟ್‌ಗಳನ್ನು ಒದಗಿಸುವ ಮೂಲಕ ಬಾಹ್ಯಾಕಾಶ ಸಹಕಾರವನ್ನು ಹೊಸ ಮಟ್ಟಕ್ಕೆ ಒಯ್ದಿದೆ. 

Advertisement

Udayavani is now on Telegram. Click here to join our channel and stay updated with the latest news.

Next