Advertisement

ಚೀನಾ ಗಡಿಯಲ್ಲಿ ಘರ್ಜಿಸಿದ ಬೆನಕನಕಟ್ಟಿಯ ಹುಲಿ

03:25 PM Oct 10, 2020 | sudhir |

ಧಾರವಾಡ: ಚೀನಾ ಮತ್ತು ಭಾರತದ ಮಧ್ಯೆ ಕಳೆದ ಕೆಲವು ತಿಂಗಳಿಂದ ಗಡಿಯಲ್ಲಿ ಸದಾ ತಂಟೆ ತಕರಾರು ನಡೆದೇ ಇದೆ. ಅಲ್ಲಿ ಭಾರತೀಯ ಯೋಧರು ಅನೇಕ ಬಾರಿ ಸಂಕಷ್ಟಗಳನ್ನು ಎದುರಿಸಿದ್ದು ಉಂಟು. ಚೀನಾದ ಗಡಿಯಲ್ಲಿ ದೇಶ ಕಾಯುತ್ತಿರುವ ತಾಲೂಕಿನ ಬೆನಕನಕಟ್ಟಿ ಗ್ರಾಮದ ಯೋಧ ಈರಯ್ಯ ಪೂಜಾರ ತನ್ನ ವಾಟ್ಸ್‌ಆ್ಯಪ್‌ ಮೂಲಕ ಚೀನಾದ ಗಡಿಯಲ್ಲಿದ್ದೇನೆ.
ಅದು ಚೀನಾ ಗಡಿ, ಇದು ಬೆನಕನಕಟ್ಟಿ ಹುಲಿ, ನಾನು ಯುದ್ಧಕ್ಕಾಗಿಯೇ ಬಂದಿದ್ದೇನೆ. ನೋಡೋಣಾ ಏನಾಗುತ್ತದೆಯೋ? ಬೆನಕಪ್ಪನ ದಯೆ ಇರಲಿ ಎಂದೆಲ್ಲ ಪಕ್ಕಾ ಜವಾರಿ ಭಾಷೆಯಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡು ಅದನ್ನು ತನ್ನ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆತನ ಬಗ್ಗೆ ಯುವ ಪೀಳಿಗೆ ಹೆಮ್ಮೆಯ ಮಾತುಗಳನ್ನಾಡುತ್ತಿದ್ದಾರೆ.

Advertisement

ತಮ್ಮ ಮಗನ ದೇಶ ಸೇವೆ ಕುರಿತು ತಂದೆ ಮಲ್ಲಯ್ಯ ಮತ್ತು ತಾಯಿ ಅನ್ನಪೂರ್ಣಾ ಅವರು ಅಭಿಮಾನದ ಮಾತುಗಳನ್ನಾಡಿದ್ದಾರೆ. ಗ್ರಾಮೀಣ ಭಾಗದ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಂತೂ ಯೋಧ ಈರಯ್ಯ ಪೂಜಾರ ಇದೀಗ ಸ್ಟೇಟಸ್‌ ಮತ್ತು ಡಿಪಿಯಲ್ಲಿ ರಾರಾಜಿಸುತ್ತಿದ್ದಾರೆ.

ಇದನ್ನೂ ಓದಿ:ಮಹದಾಯಿ- ಕೃಷ್ಣಾ ನೀರು ಹಂಚಿಕೆ ವಿವಾದ: ಕೇಂದ್ರ ಸಚಿವರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next