ವಾಷಿಂಗ್ಟನ್: 26/11 ರ ಮುಂಬೈ ದಾಳಿಯ ಆರೋಪಿಯಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ್ದ ಸಾಜಿದ್ ಮಿರ್‌ನನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸಬೇಕು ಎಂದು ಅಮೆರಿಕ ಮತ್ತು ಭಾರತ ನೀಡಿದ್ದ ಪ್ರಸ್ತಾಪಕ್ಕೆ ಚೀನಾ ಮಂಗಳವಾರ ತಡೆ ನೀಡಿದೆ.
ಸಾಜಿದ್ ಮಿರ್‌ನನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸಬೇಕು ಎಂದು ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾಪಕ್ಕೆ ಭಾರತ ಬೆಂಬಲ ನೀಡಿತ್ತು.
ಕಳೆದ ಸೆಪ್ಟೆಂಬರ್‌ನಲ್ಲೇ ಬೀಜಿಂಗ್ ಈ ಪ್ರಸ್ತಾಪವನ್ನು ತಡೆ ಹಿಡಿದಿತ್ತು. ಇದೀಗ ಸಾಜಿದ್ ಮಿರ್‌ನನ್ನು ʻಜಾಗತಿಕ ಭಯೋತ್ಪಾದಕʼ ಎಂದು ಘೋಷಿಸುವ ಪ್ರಸ್ತಾಪಕ್ಕೆ ಬೀಜಿಂಗ್ ತಡೆ ನೀಡಿದೆ.
2008 ರ ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಸಾಜಿದ್ ಮಿರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ ಭಯೋತ್ಪಾದಕ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಆತನ ತಲೆಗೆ 5 ಯು.ಎಸ್ ಡಾಲರ್ ಬಹುಮಾನವನ್ನೂ ಘೋಷಿಸಿತ್ತು.
ಕಳೆದ ಜೂನ್‌ನಲ್ಲಿ ಉಗ್ರ ಕೃತ್ಯಗಳಿಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಸಾಜಿದ್ ಮಿರ್‌ಗೆ ಪಾಕಿಸ್ತಾನ ಕೋರ್ಟ್ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:
ಐಷಾರಾಮಿ ಜೀವನಕ್ಕಾಗಿ ಇವು ವಿಶ್ವದ ಅತ್ಯಂತ ದುಬಾರಿ ನಗರಗಳು; ಇಲ್ಲಿದೆ ಪಟ್ಟಿ