Advertisement
ಚೀನದ ಸನ್ಮಿತ್ರ ರಾಷ್ಟ್ರ ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಜಗತ್ತಿನ ವ್ಯವಸ್ಥೆ ಹಳಿತಪ್ಪಿಸಿದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಜತೆಗೂಡಿ ಪ್ರಬಲ ರೋಗಕಾರಕಗಳ ಅಭಿವೃದ್ಧಿ ಬಗ್ಗೆ ಸಂಶೋಧನೆ ನಡೆಸುತ್ತಿವೆ.
Related Articles
Advertisement
ಹೈಬ್ರಿಡ್ ಸಮರ: ಭದ್ರತಾ ಸಂಸ್ಥೆಗಳಿಂದ ಪರಿಶೀಲನೆಚೀನದ ಹೈಬ್ರಿಡ್ ಸಮರದ ಮಾಹಿತಿ ಹೊರಬೀಳುತ್ತಿದ್ದಂತೆಯೇ ಭದ್ರತಾ ಸಂಸ್ಥೆಗಳು ಜಾಗೃತಗೊಂಡಿವೆ. ಭಾರತದ 10 ಸಾವಿರಕ್ಕೂ ಅಧಿಕ ಮಂದಿಯ ದತ್ತಾಂಶವನ್ನು ಚೀನ ಸಂಗ್ರಹಿಸುವ ಕುರಿತು ಈ ಸಂಸ್ಥೆಗಳು ಮಾಹಿತಿ ಕಲೆಹಾಕಲು ಆರಂಭಿಸಿವೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಈ ಕುರಿತು ವರದಿ ನೀಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸ್ವಿಗ್ಗಿ, ಜೊಮ್ಯಾಟೋ ಮೇಲೂ ಕಣ್ಣು: ಇದೇ ವೇಳೆ, ದೇಶದ ಪಾವತಿ ಮತ್ತು ಆಹಾರ ಪೂರೈಕೆ ಆ್ಯಪ್‌ಗ್ಳಾಗಿರುವ ಪೇಟಿಎಂ, ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ 1,400 ಕಂಪೆನಿಗಳ ಮೇಲೆ ಕೂಡ ಚೀನದ ಝೆನುÏವಾ ಕಂಪೆನಿ ನಿಗಾ ಇರಿಸಿದ ಮಾಹಿತಿ ಬಹಿರಂಗಗೊಂಡಿದೆ. ಸಂಸ್ಥೆಯ ಆಯಕಟ್ಟಿನ ಹುದ್ದೆಯಲ್ಲಿರುವವರು, ಅವುಗಳಲ್ಲಿ ಹೂಡಿಕೆ ಮಾಡಿರುವವರು ಸೇರಿದಂತೆ ಪ್ರಮುಖರ ಮೇಲೆ ನಿಗಾ ಇರಿಸಲಾಗಿದೆ. ಯೂಬರ್ ಇಂಡಿಯಾ, ಪೆಯು, ಫ್ಲಿಪ್‌ಕಾರ್ಟ್, ನಯ್‌ಕಾ, ಫೋನ್ ಪೆ, ಬಿಗ್‌ಬಾಸ್ಕೆಟ್‌ನ ಮಾಹಿತಿಗಳನ್ನೂ ಚೀನ ಸಂಗ್ರಹಿಸಿರುವುದು ಗೊತ್ತಾಗಿದೆ. ಅಲಿಬಾಬಾದಿಂದ ಮಾಹಿತಿ ಕಳವು: ಚೀನದ ಇ-ಕಾಮರ್ಸ್ ದೈತ್ಯ ಅಲಿಬಾಬಾ ಭಾರತದಲ್ಲಿ ಹೊಂದಿರುವ 72 ಸರ್ವರ್‌ಗಳು ದೇಶದ ಗ್ರಾಹಕರ ಬಳಕೆದಾರರ ಮಾಹಿತಿ ಕಳವು ಮಾಡುತ್ತಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ವರದಿ ಆಧರಿಸಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.