Advertisement

ಡೋಕ್‌ಲಾಂ ಸಮೀಪ ಚೀನ ಸೇನೆ ಜಮಾವಣೆ; ರಸ್ತೆ ಕಾಮಗಾರಿ

11:01 AM Oct 06, 2017 | udayavani editorial |

ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್‌ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ಆಚೆಗೆ ಚೀನ ತನ್ನ ಸೇನೆಯನ್ನು ಜಮಾಯಿಸಿದ್ದು ಅಲ್ಲಿನ ರಸ್ತೆಯನ್ನು ಅಗಲಗೊಳಿಸುವ ಕಾರ್ಯವನ್ನು ಬಿರುಸಿನಿಂದ ಆರಂಭಿಸಿದೆ.

Advertisement

ಭಾರತ ಮತ್ತು ಚೀನ ಸೇನೆ ಸುಮಾರು ಮೂರು ತಿಂಗಳ ಕಾಲ ಮುಖಾಮುಖೀಯಾಗಿದ್ದ ವಿವಾದಿತ ಡೋಕ್‌ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ಆಚೆಗೆ ಚೀನ ಭಾರೀ ದೊಡ್ಡ ಸಂಖ್ಯೆಯಲ್ಲಿ ತನ್ನ ಸೇನೆಯನ್ನು ಜಮಾಯಿಸಿರುವುದು ಮತ್ತು ರಸ್ತೆ ಅಗಲಗೊಳಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಆರಂಭಿಸಿರುವುದು ಭಾರತಕ್ಕೆ ಕಳವಳದ ಸಂಗತಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ. 

ಡೋಕ್‌ಲಾಂ ನ ಚುಂಬಿ ಕಣಿವೆಯಲ್ಲಿ ಚೀನ ಸೇನೆಯ ಬೃಹತ್‌ ಜಮಾವಣೆಯು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂದು ಭಾರತೀಯ ವಾಯು ಪಡೆ ಮುಖ್ಯಸ್ಥ, ಏರ್‌ ಚೀಫ್ ಮಾರ್ಶಲ್‌, ಬಿ ಎಸ್‌ ಧನೋವಾ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ. 

“ವಿವಾದಿತ ಡೋಕ್‌ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ಆಚೆಗೆ ಚೀನ ಸೇನೆ ಜಮಾವಣೆಯಾಗಿರುವುದು ಉಭಯ ದೇಶಗಳ ಸೇನಾ ಮುಖಾಮುಖೀ ಅಲ್ಲವಾದರೂ ಉದ್ವಿಗ್ನತೆಗೆ ಕಾರಣವಾಗಿದೆ. ಚುಂಬಿ ಕಣಿವೆಯಲ್ಲಿ ಚೀನ ಸೇನೆಯ ಕಾರ್ಯ ಚಟುವಟಿಕೆಗಳು ಮುಗಿದೊಡನೆಯೇ ಅದು ಅಲ್ಲಿಂದ ಹಿಂದೆ ಸರಿಯುವುದಾಗಿ ನಾವು ನಿರೀಕ್ಷಿಸುತ್ತೇವೆ’ ಎಂದು ಧನೋವಾ ಹೇಳಿರುವುದನ್ನು ಪಿಟಿಐ ಉಲ್ಲೇಖೀಸಿ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next