Advertisement

ಮರಳಿ ಶಾಲೆಯತ್ತ ಮಕ್ಕಳು…

01:27 PM Jul 17, 2020 | mahesh |

ಕೋವಿಡ್ ಸೋಂಕಿನಿಂದಾಗಿ ಜಗತ್ತಿನಾದ್ಯಂತ 103 ಕೋಟಿಗೂ ಅಧಿಕ ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಗಿದೆ. ಮಕ್ಕಳು ಬೇಗನೆ ಸೋಂಕಿಗೆ ಗುರಿಯಾಗುವ ಕಾರಣ ಸೋಂಕಿನ ವ್ಯಾಪಿಸುವಿಕೆಗೆ ಹೆದರಿ ಬಹುತೇಕ ದೇಶಗಳು ಶಾಲೆಗಳನ್ನು ಮುಚ್ಚಿವೆ. ಭಾರತ ಸೇರಿದಂತೆ ಕೆಲವು ದೇಶಗಳು ಸದ್ಯದ ಮಟ್ಟಿಗೆ ಆನ್‌ಲೈನ್‌ ಶಿಕ್ಷಣದ ಮೊರೆಹೋಗಿವೆ. ಸೋಂಕು ತಗ್ಗಿರುವಂಥ ರಾಷ್ಟ್ರಗಳು ನಿಧಾನವಾಗಿ ಶಾಲೆಗಳನ್ನು ತೆರೆಯುತ್ತಿವೆ. ಎಲ್ಲೆಲ್ಲಿ ಶಾಲೆಗಳು ಪುನರಾರಂಭಗೊಂಡಿವೆ ಏನೇನು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ.

Advertisement

ಎಲ್ಲೆಲ್ಲಿ ಮರು ಆರಂಭ?
ತೈವಾನ್‌, ಜರ್ಮನಿ, ಡೆನ್ಮಾರ್ಕ್‌, ಫ್ರಾನ್ಸ್‌, ಸ್ವೀಡನ್‌, ನಾರ್ವೆ, ವಿಯೆಟ್ನಾಂ, ನ್ಯೂಜಿಲೆಂಡ್‌, ಐಸ್‌ಲ್ಯಾಂಡ್‌, ದಕ್ಷಿಣ ಕೊರಿಯಾದಲ್ಲಿ ಪುನರಾರಂಭಗೊಂಡಿವೆ. ಮಲೇಷ್ಯಾದಲ್ಲಿ ಭಾಗಶಃ ತೆರೆಯಲಾಗಿದೆ. ಇಟಲಿ ಯಲ್ಲೂ ಶಾಲೆ ತೆರೆಯಲು ನಿರ್ಧರಿಸಲಾಗಿದೆ.

ನಿಲ್ಲದ ಭೀತಿ
ಚೀನದಲ್ಲಿ 2ನೇ ಹಂತದ ವ್ಯಾಪಿಸುವಿಕೆ ಆರಂಭವಾದ ಕಾರಣ ಮತ್ತೆ ಶಾಲೆಗಳನ್ನು ಮುಚ್ಚಲಾಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನಲ್ಲಿ ಶಾಲೆ ಆರಂಭವಾದರೂ ವಾರಕ್ಕೆ ಒಂದು ದಿನವಷ್ಟೇ ತರಗತಿ ನಡೆಯುತ್ತಿದೆ.
ಇಸ್ರೇಲ್‌ನಲ್ಲಿ ಮೇ 17ರಂದು ಶಾಲೆಗಳು ಪುನರಾರಂಭವಾಗಿದ್ದವು. 1,335 ವಿದ್ಯಾರ್ಥಿಗಳು, 691 ಶಿಕ್ಷಕರಿಗೆ ಸೋಂಕು ತಗಲಿದೆ.

ಮುಂಜಾಗ್ರತ ಕ್ರಮಗಳು
ಸಾಕಷ್ಟು ಗಾಳಿ-ಬೆಳಕಿರುವ ವಿಶಾಲ ಸ್ಥಳಗಳಲ್ಲಿ ತರಗತಿ.
ಪರಸ್ಪರ ಮಕ್ಕಳ ನಡುವೆ, ಶಿಕ್ಷಕರ ನಡುವೆ ಶಾರೀರಿಕ ಅಂತರ ಕಾಯ್ದುಕೊಳ್ಳುವಿಕೆ.
ಶಾಲೆಗಳಲ್ಲಿ ಎಂದಿನಂತೆ ಅಸೆಂಬ್ಲಿ, ಸಾಮೂಹಿಕ ಪ್ರಾರ್ಥನೆ ರದ್ದು.
ಮಕ್ಕಳು ಒಟ್ಟೊಟ್ಟಿಗೆ ಬಂದು ಏಕಕಾಲದಲ್ಲಿ ತರಗತಿಯೊಳಗೆ ನುಗ್ಗದಂತೆ ವ್ಯವಸ್ಥೆ. ನಿಗದಿತ ಸಮಯದಲ್ಲಿ ಇಂತಿಷ್ಟು ಮಕ್ಕಳಿಗಷ್ಟೇ ಪಾಠ ಎಂಬ ನಿಯಮ (ಬೆಳಗ್ಗೆ ಒಂದು ತಂಡ, ಅಪರಾಹ್ನ ಒಂದು ತಂಡ).
ತರಗತಿ ಪ್ರವೇಶಕ್ಕೂ ಮುನ್ನ ದೇಹದ ಉಷ್ಣತೆ ತಪಾಸಣೆ, ಆಗಾಗ ಮಕ್ಕಳಿಗೆ ಕೈತೊಳೆಯುವ ವ್ಯವಸ್ಥೆ, ಮಾಸ್ಕ್ ಕಡ್ಡಾಯ.
ಪ್ರತಿ ದಿನವೂ ಶಾಲಾ ಕಟ್ಟಡ, ಆವರಣ ಸ್ಯಾನಿಟೈಸ್‌ ಮಾಡುವುದು.
ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರಿಗೆ ಧೈರ್ಯ ತುಂಬುವುದು.

Advertisement

Udayavani is now on Telegram. Click here to join our channel and stay updated with the latest news.

Next