Advertisement

ಕಾನೂನು ನೆರವು ಅಭಿಯಾನದಡಿ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

06:05 PM Nov 14, 2021 | Team Udayavani |

ದಾಂಡೇಲಿ: ಮಕ್ಕಳು ಈ ದೇಶದ ಆಸ್ತಿ. ಭವಿಷ್ಯದಲ್ಲಿ ಶಕ್ತಿಯುತ ಹಾಗೂ ಸದೃಢ ಭಾರತ ನಿರ್ಮಾಣವಾಗುವಲ್ಲಿ ಈಗಿನ ಮಕ್ಕಳ ಪಾತ್ರ ಬಹುಮುಖ್ಯವಾಗಲಿದೆ. ಜೀವನದ ಮಹತ್ವದ ಘಟ್ಟದಲ್ಲಿರುವ ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶವನ್ನು ಕ್ರಿಯಾಶೀಲ ನಡವಳಿಕೆಗಳೊಂದಿಗೆ ಜ್ಞಾನಾರ್ಜನೆಗೆ ಬಳಸಿಕೊಳ್ಳುವುದರ ಮೂಲಕ ರಾಷ್ಟ್ರದ ಮಹತ್ವದ ಆಸ್ತಿಯಾಗಬೇಕೆಂದು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ.ಆರ್.ಜೆ.ಎಸ್ ಅವರು ಹೇಳಿದರು.

Advertisement

ಅವರು ಭಾನುವಾರ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಮತ್ತು ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ನೆರವು ಅಭಿಯಾನದಡಿಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಕ್ಕಳನ್ನು ಅತೀಯಾಗಿ ಪ್ರೀತಿಸುತ್ತಿದ್ದರು. ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಯ ಹಿನ್ನಲೆಯಲ್ಲಿ ನೆಹರು ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಭವಿಷ್ಯದ ಬಗ್ಗೆ ಉನ್ನತವಾದ ಗುರಿಯನ್ನಿಟ್ಟು ಅಚಲವಾದ ಶೃದ್ದೆಯಿಂದ ಶೈಕಣಿಕವಾಗಿ ಯಶಸ್ಸನ್ನು ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಪ್ರವೀಣ.ಆರ್.ಜೆ.ಎಸ್ ಅವರು ಕರೆ ನೀಡಿದರು.

ಅಧ್ಯಕ್ಷತೆಯನ್ನು ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸೆಲ್ವಿ ಅವರು ವಹಿಸಿ ಮಕ್ಕಳು ಪರಿಶುದ್ದ ಮನಸ್ಸಿನವರಾಗಿದ್ದಾರೆ.  ಮಕ್ಕಳು ಜೀವನದಲ್ಲಿ ಯಶಸ್ಸಿನೆಡೆಗೆ ಸಾಗಬೇಕಾದರೇ ಕಠಿಣ ಅಧ್ಯಯನ ಶೀಲರಾಗಬೇಕೆಂದು ಕರೆ ನೀಡಿ, ಸಿವಿಲ್ ನ್ಯಾಯಾಲಯದ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿರುವುದು ಸಂತಸವಾಗಿದೆ ಎಂದರು.

ಇದನ್ನೂ ಓದಿ: ಕಾಪಿಕಾಡ್ ಜೊತೆ FULL ON ತಮಾಷೆ

ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಜೇಮ್ಸ್ ಡಿಸೋಜಾ, ವಕೀಲರ ಸಂಘದ ಕಾರ್ಯದರ್ಶಿ ವಿಶ್ವನಾಥ ಲಕ್ಷ್ಯಟ್ಟಿ, ವಕೀಲರುಗಳಾದ ಎಚ್.ಎಸ್.ಕುಲಕರ್ಣಿ, ಎಸ್.ಸೋಮಕುಮಾರ್, ಸುಮಿತ್ರಾ,ಕೆ, ರಾಜಶೇಖರ.ಐ.ಎಚ್, ರಾಘವೇಂದ್ರ ಗಡೆಪ್ಪನವರ ಅವರು ಭಾಗವಹಿಸಿ ಮಕ್ಕಳ ದಿನಾಚರಣೆಯ ಶುಭ ಕೋರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

ಜೋಯಿಡಾದ ಸಹ್ಯಾದ್ರಿ ಕಲಾ ತಂಡದಿಂದ ತಂಡದ ಸದಸ್ಯರುಗಳಾದ ನರಸಿಂಹ ಭಟ್, ಸುದರ್ಶನ ಹೆಗಡೆ, ಕೃಷ್ಣ ನಾಯ್ಕ, ಮಂಜು ಶೆಟ್ಟಿ, ಕೀರ್ತಿಧರ ಹೆಗಡೆ ಮತ್ತು ಉದಯ ಪಾಟೀಲ ಅವರುಗಳಿಂದ ನಡೆದ ಪರಿಸರ ಸಂರಕ್ಷಣೆ, ವನ್ಯಪ್ರಾಣಿಗಳ ಬಗ್ಗೆ ಅರಿವು, ಪ್ರಕೃತಿಯ ವೈಶಿಷ್ಟ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಬೀಧಿ ನಾಟಕ ಎಲ್ಲರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next