Advertisement

ಮಕ್ಕಳ ಸಂರಕ್ಷಣೆ ಜನಾಂದೋಲನವಾಗಲಿ

12:25 PM Sep 24, 2017 | Team Udayavani |

ಬೀದರ: ನಮ್ಮ ನಾಳೆಯ ಬಹುದೊಡ್ಡ ಸಂಪತ್ತಾದ ಮಕ್ಕಳನ್ನು ಸಂರಕ್ಷಿಸುವ ಜನಜಾಗೃತಿ ಕಾರ್ಯಕ್ರಮಗಳು ಜನಾಂದೋಲನ ರೀತಿಯಲ್ಲಿ ನಡೆಯುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.

Advertisement

ನಗರದ ರಂಗ ಮಂದಿರದಲ್ಲಿ ಶನಿವಾರ ನಡೆದ ನೊಬೆಲ್‌ ಶಾಂತಿ ಪುರಸ್ಕೃತ ಕೈಲಾಸ್‌ ಸತ್ಯಾರ್ಥಿ ಅವರ ನೇತೃತ್ವದ “ಭಾರತ ಯಾತ್ರಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳೇ ನಮ್ಮ ದೊಡ್ಡ ಆಸ್ತಿಯಿದ್ದಂತೆ. ಮಕ್ಕಳ ಸಂರಕ್ಷಣೆಗಾಗಿ ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿ, ಭ್ರೂಣ ಹತ್ಯೆ, ಮಕ್ಕಳ ಸಾಗಣೆ, ಮಕ್ಕಳ ವ್ಯಾಪಾರದಂತಹ ಕೃತ್ಯಗಳು ಕೊನೆಗೊಳ್ಳಬೇಕು. ಈ ಕೆಟ್ಟ ಪದ್ಧತಿಗಳನ್ನು ತೊಲಗಿಸುವ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಮಕ್ಕಳ ಸಂರಕ್ಷಣೆಯಲ್ಲಿ ತಂದೆ- ತಾಯಂದಿರ ಪಾತ್ರವೂ ಇದೆ ಎಂಬುದನ್ನು ಅರಿಯಬೇಕು ಎಂದರು.

ಮಕ್ಕಳನ್ನು ದುಡಿಸಿಕೊಳ್ಳುವ ಮನಸ್ಥಿತಿಯು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದಂತಹ ಕುಕೃತ್ಯವು ನಮ್ಮ ನಾಗರಿಕತೆಗೆ ಶಾಪವಿದ್ದಂತೆ. ಮಕ್ಕಳನ್ನು ತಪ್ಪು ದಾರಿಗೆ ಎಳೆಯುವ ರಾಕ್ಷಸಿ ಪ್ರವೃತ್ತಿ ಕೊನೆಯಾಗಬೇಕು. ಎಲ್ಲ ಸಮಸ್ಯೆಗಳ ಮೂಲಬೇರಾದ ಬಡತನವನ್ನು ತೊಲಗಿಸಬೇಕು. ಪಾಲಕರು ಹೆಣ್ಣು ಮತ್ತು ಗಂಡು ಮಕ್ಕಳೆಂದು ಬೇಧ-ಭಾವ ಮಾಡಬಾರದು ಎಂದು ಹೇಳಿದರು.

ಭಾಲ್ಕಿಯ ಡಾ| ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳ ಸಂರಕ್ಷಣೆ ವಿಷಯದಲ್ಲಿ ಎಲ್ಲರೂ
ಜಾಗೃತರಾಗಬೇಕಿದೆ. ಮಕ್ಕಳ ಸಮಸ್ಯೆಗಳು ಗೊತ್ತಿದ್ದೂ ಆ ಬಗ್ಗೆ ಧ್ವನಿ ಎತ್ತದಿರುವುದು ಸರಿಯಲ್ಲ. ನಾವೆಲ್ಲರೂ ಸೇರಿ ಹೃದಯವನ್ನು ಬದಲಿಸುವ ಕಾರ್ಯ ಮಾಡಬೇಕಿದೆ. ಮಕ್ಕಳಿಗೆ ಸಂಪತ್ತನ್ನು ಕೊಡುವುದು ಬೇಡ, ಅವರಿಗೆ ಪ್ರೀತಿಯನ್ನು ಧಾರೆ ಎರೆಯೋಣ ಎಂದು ಹೇಳಿದರು.

ಫೌಂಡೇಶನ್‌ ಎಂ.ಡಿ. ರಾಹುಲ್‌ ಶ್ರಾವತ್‌ ಮಾತನಾಡಿ, ಸುರಕ್ಷಿತ ಬಾಲ್ಯ ಸುರಕ್ಷಿತ ಭಾರತ ಎಂದು ಜನಜಾಗೃತಿ ಮೂಡಿಸಲು ಈ ಯಾತ್ರ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಸೆ.14ರಿಂದ ಆರಂಭಗೊಂಡ ಈ ಯಾತ್ರೆಯು 22 ರಾಜ್ಯಗಳಲ್ಲಿ ಒಟ್ಟು 11,000 ಕಿ.ಮೀ. ಸಂಚರಿಸಲಿದೆ. ಈ ತಂಡದಲ್ಲಿ ಒಟ್ಟು 120 ಸದಸ್ಯರಿದ್ದಾರೆ ಎಂದು ಹೇಳಿದರು.

Advertisement

ಮಕ್ಕಳ ಹಕ್ಕುಗಳ ಹೋರಾಟಗಾರ ಭುವನ ರೀಬು ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಸಕರ ರಹೀಂ ಖಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಬಳಿಕ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ ತಡೆ ಜಾಗ್ರತಿ ಮೂಡಿಸುವ ನಾಟಕಗಳು ವಿವಿಧ ಶಾಲಾ ಮಕ್ಕಳಿಂದ ನಡೆದವು.

ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಬುಡಾ ಅಧ್ಯಕ್ಷ ಅಧ್ಯಕ್ಷ ಸಂಜಯ ಜಾಗೀರದಾರ್‌, ಜಿಪಂ ಸಿಇಒ
ಡಾ| ಆರ್‌. ಸೆಲ್ವಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಐ.ಎಚ್‌ ಪಾಂಚಾಳೆ, ಮಕ್ಕಳ
ರಕ್ಷಣಾ ಅ ಕಾರಿ ಪಾಂಡುರಂಗ ಬಿ., ಪ್ರಶಾಂತ ಬಿರಾದಾರ, ಸಂಘ ಸಂಸ್ಥೆಗಳ ಪ್ರಮುಖರಾದ ಡಾ| ಅಬ್ದುಲ್‌ ಖದೀರ, ಪುನಿತ ಸಾಳೆ, ಬಸವಕುಮಾರ ಪಾಟೀಲ ಪಾಲ್ಗೊಂಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರ್ತಾಪುರೆ ನಿರೂಪಿಸಿದರು. ರತ್ನಾ ಪಾಟೀಲ ಸ್ವಾಗತಿಸಿದರು. ಪ್ರಕಾಶ ಡೋಳೆ ವಂದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕೈಲಾಸ್‌ ಸತ್ಯಾರ್ಥಿ ಮಕ್ಕಳ ಫೌಂಡೇಶನ್‌, ಸಮೃದ್ಧಿ ಚಾರಿಟೇಬಲ್‌ ಟ್ರಸ್ಟ್‌, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next