Advertisement

ಮಕ್ಕಳ ಶಿಕ್ಷಣದತ್ತ ಗಮನ ಹರಿಸಲು ಖಾಝಿ ಸಲಹೆ

01:44 AM Mar 27, 2022 | Team Udayavani |

ಉಡುಪಿ: ಹಿಜಾಬ್‌ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆಯಿದೆ. ಆದರೆ ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಜಿಲ್ಲಾ ಸಂಯುಕ್ತ ಜಮಾಅತ್‌ ಖಾಝಿ ಝೈನುಲ್‌ ಉಲಮಾ ಎಂ. ಅಬ್ದುಲ್‌ ಹಮೀದ್‌ ಮುಸ್ಲಿಯಾರ್‌ ಮಾಣಿ ತಿಳಿಸಿದ್ದಾರೆ.

Advertisement

ಮಾ. 28ರಿಂದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದೆ, ಅನಂತರದ ದಿನಗಳಲ್ಲಿ ಪದವಿಪೂರ್ವ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದೆ.

ಹೆತ್ತವರು ತಮ್ಮ ಮಕ್ಕಳ ಪರೀಕ್ಷೆಯ ವಿಷಯದಲ್ಲಿ ಗಮನಹರಿಸಿ, ಸೂಕ್ಷ್ಮ ವಿಷಯಗಳನ್ನು ದೀರ್ಘ‌ ದೃಷ್ಟಿಯಿಂದ ನೋಡಿ. ನಮ್ಮಿಂದ ದೇಶದ ಕೋಮು ಸೌಹಾರ್ದಕ್ಕೆ ಧಕ್ಕೆ ಆಗಬಾರದು. ಜಾತ್ಯತೀತ ರಾಷ್ಟ್ರವಾದ ಭಾರತದ ಸಂವಿಧಾನವು ಅವರವರ ಧರ್ಮದ ಆಚರಣೆಗಳನ್ನು ಮಾಡಲು ಅವಕಾಶವನ್ನು ನೀಡಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಮಾಡುವ ತಪ್ಪು ಮಾಹಿತಿಗಳೇ ಸಮಸ್ಯೆಗಳು ಇಷ್ಟೊಂದು ಬಿಗಡಾಯಿಸಲು ಕಾರಣ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next