Advertisement

ಪರೀಕ್ಷಾ ಪೇ ಚರ್ಚಾ ವೀಕ್ಷಿಸಿದ ಮಕ್ಕಳು

06:06 PM Apr 02, 2022 | Team Udayavani |

ಚಾಮರಾಜನಗರ: ನವದೆಹಲಿಯ ತಾಳ್ಕಟೋರ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಪರೀಕ್ಷಾ ಪೇ ಚರ್ಚಾ ನೇರ ಸಂವಾದದ ಪ್ರಸಾರ ಕಾರ್ಯಕ್ರಮವನ್ನು ಜಿಲ್ಲೆಯ ಹೊಂಡರಬಾಳು ಜವಹರ ನವೋದಯ, ಮಾದಾಪುರದಲ್ಲಿರುವ ಕೇಂದ್ರೀಯ ವಿದ್ಯಾಲಯ ಸೇರಿ ಇತರೆಡೆ ವಿದ್ಯಾರ್ಥಿಗಳು ವೀಕ್ಷಿಸಿದರು.

Advertisement

ವಿದ್ಯಾರ್ಥಿಗಳಲ್ಲಿ ಕಲಿಕಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ಆತಂಕ ದೂರ ಮಾಡಿ ಒತ್ತಡ ರಹಿತ ವಾತಾವರಣ ನಿರ್ಮಿಸಲು ಪೂರಕವಾದ ನೇರ ಸಂವಾದದ ಪ್ರಸಾರವನ್ನು ಹೊಂಡರಬಾಳುವಿನಲ್ಲಿರುವ ಜವಾಹರ್‌ ನವೋದಯ ವಿದ್ಯಾಲಯದ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ವೀಕ್ಷಿಸಿದರು.

ಸಂವಾದದ ಪ್ರಸಾರ ವೀಕ್ಷಣೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಶಿಸ್ತಿನಿಂದ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ನಗರದ ಬಳಿಯಿರುವ ಮಾದಾಪುರದ ಕೇಂದ್ರೀಯ ವಿದ್ಯಾಲಯದಲ್ಲಿಯೂ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಪ್ರಸಾರವನ್ನು ವಿದ್ಯಾರ್ಥಿಗಳು ವೀಕ್ಷಿಸಲು ಸಕಲ ವ್ಯವಸ್ಥೆ ಮಾಡಲಾಗಿತ್ತು. 6 ರಿಂದ 11ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸೆಮಿನಾರ್‌ ಹಾಲ್‌ನಲ್ಲಿ ಹಾಗೂ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಸಂವಾದ ವೀಕ್ಷಿಸಿದರು.

ಹೊಂಡರಬಾಳು ಜವಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ವಿ.ಪ್ರಸಾದ್‌, ಮಾದಾಪುರದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ನಿರ್ಮಲಾಕುಮಾರಿ, ಶಿಕ್ಷಣ ಅಧಿಕಾರಿಗಳಾದ ಮಂಜುನಾಥ್‌, ಲಕ್ಷ್ಮೀಪತಿ, ಬೋಧಕರಾದ ಯಲ್ಲಪ್ಪ ಬೈಯಾಪುರ, ಕುರಿಯನ್‌ ಥಾಮಸ್‌ ಇತರರು ಹಾಜರಿದ್ದರು.

ಶ್ರೇಯಾಗೆ ನಿರಾಶೆ: ನಗರದ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಅವರನ್ನು ಪ್ರಧಾನಿಗಳ ಜೊತೆ ಪರೀಕ್ಷಾ ಪೇ ಚರ್ಚಾ ವರ್ಚುವಲ್‌ ಸಂವಾದ ನಡೆಸಲು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ಸುದ್ದಿಗೋಷ್ಠಿ ನಡೆಸಿ ಆಕೆಯ ಆಯ್ಕೆಯನ್ನು ಘೋಷಿಸಿದ್ದರು. ಆದರೆ, ಕೊನೆಯ ಹಂತದ ಪಟ್ಟಿಯಲ್ಲಿ ಆಕೆಯ ಹೆಸರನ್ನು ಕೈ ಬಿಡಲಾಗಿತ್ತು. ಹೀಗಾಗಿ ಆಕೆಗೆ ಪ್ರಧಾನಿಯವರ ಜೊತೆ ಸಂವಾದ ನಡೆಸಲು ಅವಕಾಶ
ದೊರಕಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next