ಮೈಸೂರು: ಪ್ರಸ್ತುತ ದಿನಗಳಲ್ಲಿ ನೂತನ ಆವಿಷ್ಕಾರ ಹಾಗೂ ತಂತ್ರಜಾnನದ ಹಿಂದೆ ಜಗತ್ತು ನಡೆಯುತ್ತಿದ್ದು, ತಾಂತ್ರಿಕತೆ ಹೆಚ್ಚಾಗುತ್ತಿದೆ ಎಂದು ರಕ್ಷಣಾ ಸಚಿವಾಲಯದ ಮಾಜಿ ವೈಜಾnನಿಕ ಸಲಹೆಗಾರ ಡಾ. ವಾಸುದೇವ್ ಕೆ.ಅತ್ರೆ ಅಭಿಪ್ರಾಯಪಟ್ಟರು.
ನಗರದ ವಿದ್ಯಾವಿಕಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿರುವ ಮೆವ್ಸ್ ಮತ್ತು ಮೈಕ್ರೋಸಿಸ್ಟಟ್ಸ್ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ತಂತ್ರಜಾnನ ಕ್ಷೇತ್ರದಲ್ಲಿ ದೇಶವನ್ನು ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂತ್ರಜಾnನದ ಬಗ್ಗೆ ಹೆಚ್ಚಿನ ಆಸಕ್ತಿ ಮೈಗೂಡಿಸಿಕೊಂಡು ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ. ಪರಿಸರದ ಸ್ಫೂರ್ತಿಯೊಂದಿಗೆ ಸ್ಮಾರ್ಟ್ ವಸ್ತುಗಳು ಮತ್ತು ಮೈಕ್ರೋಸಿಸ್ಟಂಗಳನ್ನು ಹೇಗೆ ಅಭಿವೃದ್ಧಿಪಡಿಸಲು ಸಾಧ್ಯ ಎಂಬ ಬಗ್ಗೆ ಚಿಂತಿಸಬೇಕಿದೆ ಎಂದರು.
ತಂತ್ರಜಾnನವನ್ನು ಅನುಸರಿಸುವ ಬದಲಿಗೆ ನಮ್ಮ ದೇಶವನ್ನು ತಂತ್ರಜಾnನಕ್ಕೆ ಅನುಗುಣವಾಗಿ ಪ್ರೇರೇಪಿಸಿ ಅಭಿವೃದ್ಧಿಪಡಿಸಬೇಕಿದೆ, ಸ್ಮಾರ್ಟ್ ಮೆಟೀರಿಯಲ್ಸ್ ಮತ್ತು ಮೈಕ್ರೋ ಸಿಸ್ಟವ್ಸ್ ಕ್ಷೇತ್ರದಲ್ಲಿನ ಬೆಳವಣಿಗೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಗರದ ಜೆಎಸ್‌ಎಸ್, ಎಟಿಎಂಇ, ಎಂಆರ್‌ಐಟಿ ಸೇರಿದಂತೆ ಇನ್ನಿತರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಏರೋಸ್ಪೇಸ್ ಎಂಜಿನಿಯರಿಂಗ್, ಐಐಎಸ್‌ಸಿ ಅಧ್ಯಕ್ಷ ಪೊ›.ಎಸ್ ಗೋಪಾಲಕೃಷ್ಣ, ಶಾಸಕ ಹಾಗೂ ವಿವಿಇಟಿ ಅಧ್ಯಕ್ಷ ವಾಸು, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಕವೀಶ್‌ಗೌಡ, ಪ್ರಾಂಶುಪಾಲ ಡಾ. ಎಂ. ರವಿಶಂಕರ್, ಬೆಂಗಳೂರಿನ ಎನ್‌ಎಂಐಟಿಯ ಪೊ›. ಎಸ್. ವೇದಾ, ವಿಭಾಗದ ಮುಖ್ಯಸ್ಥೆ ಡಾ. ಬಿಂದು ಎ.ಥಾಮಸ್ ಇನ್ನಿತರರು ಹಾಜರಿದ್ದರು.