Advertisement
ರಾಮಜೀ ನಾಯಕ್ ತಾಂಡದಲ್ಲಿ 3-6 ವರ್ಷದ ಒಳಗಿನ ಸುಮಾರು 18-20 ಮಕ್ಕಳು ಇದ್ದಾರೆ. ಈ ಮಕ್ಕಳಿಗೆ ಇದುವರೆಗೂ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ. ಶಾಲಾ ಪೂರ್ವ ಶಿಕ್ಷಣ ಹಂತದಲ್ಲಿ ಓದುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ಹಾಗೇ ಶಾಲಾ ಪೂರ್ವ ಶಿಕ್ಷಣ ಪಡೆಯುವ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ವ್ಯವಸ್ಥೆ ಹಾಗೂ ಸಾಮಾನ್ಯ ಜ್ಞಾನದಿಂದಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯವು ವೃದ್ಧಿಯಾಗಲು ಅಂಗನವಾಡಿ ಕೇಂದ್ರ ಮುಖ್ಯ.
Related Articles
Advertisement
ಸರಕಾರ ಗರ್ಭಿಣಿ, ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ನೀಡಲು ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ ಪ್ರತಿ ನಿತ್ಯ ಗರ್ಭಿಣಿ, ತಾಯಂದಿರಿಗೆ ಪೌಷ್ಟಿಕ ಆಹಾರ ನೀಡುವ ಮಾತಪೂರ್ಣ ಯೋಜನೆ ಜಾರಿಗೆ ತಂದ್ದಿದೆ. ಆದರೇ ಇಲ್ಲಿಯ ಗರ್ಭಿಣಿ, ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ಸಿಗದೇ. ದೂರದ ಕಿಲ್ಲಾರಹಟ್ಟಿ ಅಂಗನವಾಡಿ ಕೇಂದ್ರದವರು ತಿಂಗಳಿಗೊಮ್ಮೆ ಆಹಾರ ಪದಾರ್ಥವನ್ನು ನೀಡಿ ಕಳಿಸುತ್ತಿದ್ದಾರೆ.
ರಾಮ್‌ಜೀ ನಾಯಕ ತಾಂಡ 3-6 ವರ್ಷದ ಒಳಗಿನ ಮಕ್ಕಳು ನಮ್ಮ ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿವೆ. ಆದರೇ ಈ ಮಕ್ಕಳು ಕೇಂದ್ರಕ್ಕೆ ಬರುವದಿಲ್ಲ. ಪ್ರತಿ ವರ್ಷ 4-5 ಮಂದಿ ಗರ್ಭಿಣಿ ಬಾಣತಿಯರು ಸಿಗುತ್ತಾರೆ ಹೀಗಾಗಿ ತಾಂಡದಲ್ಲಿ ಒಂದು ಅಂಗನವಾಡಿ ಕೇಂದ್ರ ಆರಂಭ ಮಾಡಿದರೆ ಮಕ್ಕಳಿಗೂ ಹಾಗೂ ಗರ್ಭಿಣಿ ತಾಯಂದಿರಿಗೂ ಅನುಕೂಲವಾಗುತ್ತದೆ ಎಂದು ಕಿಲ್ಲಾರಹಟ್ಟಿ ಕೇಂದ್ರ ಕಾರ್ಯಕರ್ತೆ ಅವರು ಹೇಳಿದರು.
ಶಿಕ್ಷಣ ಪ್ರತಿ ಮಗುವಿನ ಹಕ್ಕು, 14ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದು ಸರಕಾರ ಹೇಳಿಕೊಳ್ಳುತ್ತವೆ. ಆದರೆ ಇದುವರಿಗೂ ಈ ತಾಂಡದ ಎಷ್ಟೋ 3-6ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ ಯಾಕೆ? ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.
3-6ವರ್ಷದ ಪ್ರತಿ ಮಕ್ಕಳು ಶಾಲಾ ಪೂರ್ವ ಶಿಕ್ಷಣ ಪಡೆಯಬೇಕು. ಈ ರಾಮ್‌ಜೀ ನಾಯಕ್ ತಾಂಡದ 3-6 ವರ್ಷದ ಮಕ್ಕಳ ಶಿಕ್ಷಣ ಸಮಸ್ಯೆ ಬಗ್ಗೆ ಕೂಡಲೇ ಸರ್ವೆ ಮಾಡಿ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುತ್ತೇವೆ. –ರೋಹಿಣಿ,ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ ಕೊಪ್ಪಳ.
ರಾಮ್‌ಜೀ ನಾಯಕ್ ತಾಂಡದ ಇಲಾಖೆಯ ಒಬ್ಬ ಅಧಿಕಾರಿಯನ್ನು ಕಳಿಸುತ್ತೇವೆ. ಇಲ್ಲಿಯ ಮಕ್ಕಳ ಸಮಸ್ಯೆ ಬಗ್ಗೆ ವರದಿ ಪಡೆದುಕೊಂಡು ಶಿಕ್ಷಣದಿಂದ ವಂಚಿತರಾಗುತ್ತಿರು 3-6ವರ್ಷದ ಮಕ್ಕಳ ಸಮಸ್ಯೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ. – ತಿಮ್ಮಣ್ಣ ಶಿರಸಿಗಿ, ಡಿಡಿ ಕೊಪ್ಪಳ.
– ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ.