Advertisement
ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಮಕ್ಕಳು ಸೇವಿಸಿದ ಆಹಾರವೇ ಕಾರಣ ಎಂದು ಪೋಷಕರು ದೂರಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಬುಧವಾರ ರಾತ್ರಿಯಿಂದಲೂ ಜ್ವರ ವಾಂತಿಯಿಂದ ಮಕ್ಕಳು ಬಳಲುತ್ತಿದ್ದರೂ ಗುರುವಾರ ಮಧ್ಯಾಹ್ನದ ತನಕ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಮುಂದಾಗಲಿಲ್ಲ.
Related Articles
Advertisement
ಬಳಿಕ ಗ್ರಾಮದಲ್ಲಿನ ಕಲುಷಿತ ನೀರಿನ ಸೇವೆಯಿಂದಲೂ ಇಂತಹ ಅವಘಡ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನೀರಿನ ಮಾದರಿ ಕಲೆಹಾಕಿ ಪರೀಕ್ಷೆಗೆ ಕಳುಹಿಸುವ ಭರವಸೆ ನೀಡಿದ್ದಾರೆ. ಅತ್ತ ನಿತಾ÷ಣಗೊಂಡಿದ್ದ 14 ಮಕ್ಕಳನ್ನು ತುರ್ತುವಾಹನದಲ್ಲಿ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಒಂದೆರಡು ಮಕ್ಕಳು ತೀವ್ರ ನಿತ್ರಾಣಗೊಂಡಿದ್ದು, ಚಿಕಿತ್ಸೆಗೆ ಚೇತರಿಸಿಕೊಳ್ಳದೇ ಇದ್ದರೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಈ ಪೈಕಿ ಒಂದು ಮಗುವಿಗೆ ಮೂರ್ಚೆರೋಗವಿದ್ದು, ಆ ಮಗು ತೀವ್ರವಾಗಿ ನಿತ್ರಾಣಗೊಂಡಿದೆ. ಮಕ್ಕಳಿಗೆ ಯಾವುದೇ ಪ್ರಾಣಪಾಯ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಕ್ಕಳನ್ನು ತುರ್ತು ವಾಹನದಲ್ಲಿ ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಪೋಷಕರು ತಮ್ಮ ತಮ್ಮ ಮಕ್ಕಳನ್ನು ತುರ್ತುವಾಹನದಿಂದ ಇಳಿಸಿಕೊಂಡು ಹೆಗಲ ಮೇಲೆ ಹೊತ್ತು ಆಸ್ಪತ್ರೆ ಒಳಗೆ ತರಾತುರಿಯಲ್ಲಿ ದೌಡಾಯಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.