Advertisement

ಶಾಲೆಗೆ ಹೋಗದೆ ಮಾರುಕಟ್ಟೆಯಲ್ಲೇ ಉಳಿದ ಮಕ್ಕಳು 

03:21 PM Jun 11, 2023 | Team Udayavani |

ಶ್ರೀನಿವಾಸಪುರ: ಬೇಸಿಗೆ ರಜೆ ಮುಗಿದು ಈಗ ಶಾಲೆ ಆರಂಭವಾಗಿದ್ದು, ಈಗಾಗಲೇ ಮಕ್ಕಳು ಆಟ ಪಾಠ ಕಲಿಯಲು ಆರಂಭಿಸಿದ್ದಾರೆ. ಆದರೆ, ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕೂಲಿ ಮಾಡುವ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗದೆ ಪೋಷಕರ ಜೊತೆ ಉಳಿದಿದ್ದು, ಇವರ ಶಿಕ್ಷಣದ ಕತೆ ಎನೆಂಬುದು ತಿಳಿಯುತ್ತಿಲ್ಲ.

Advertisement

ಪಟ್ಟಣದ ಎಪಿಎಂಸಿಯಲ್ಲಿ ಮಾವಿನ ಸೀಜನ್‌ ಪ್ರಾರಂಭವಾಗಿ ತಿಂಗಳು ಸಮೀ ಪಿಸಿದೆ. ಜುಲೈ ಮೊದಲ ವಾರದವರೆಗೂ ಇರುತ್ತದೆ ಎಂಬ ಅಂದಾಜಿದೆ. ಇದಕ್ಕಾಗಿ ಕರ್ನಾಟಕ ವಲ್ಲದೇ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಕೂಲಿ ಕಾರ್ಮಿಕರು ಸಾವಿರಾರು ಸಂಖ್ಯೆ ಯಲ್ಲಿ ಆಗಮಿಸಿದ್ದು, ಎಪಿಎಂಸಿಯಲ್ಲಿನ ವಿವಿಧ ಮಂಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಪೋಷಕರಿಗೂ ಚಿಂತೆ ಇಲ್ಲ: ಎರಡು ತಿಂಗಳ ಕಾಲ ಕೆಲಸ ಇರುತ್ತದೆ. ಒಂದಿಷ್ಟು ಕಾಸು ಸಂಪಾದನೆ ಮಾಡಿಕೊಳ್ಳಬಹು ದೆಂಬ ನಿರೀಕ್ಷೆ ಕೂಲಿ ಕಾರ್ಮಿಕರದ್ದಾಗಿದೆ. ಹೀಗೆ ಕೂಲಿ ಬಂದವರು ತಮ್ಮ ಮಕ್ಕಳನ್ನೂ ಜೊತೆಗೆ ಕರೆತರುತ್ತಾರೆ. ಇಲ್ಲಿಗೆ ಬರುವ ಮಕ್ಕಳು ಮಂಡಿಗಳಲ್ಲಿ ಕೆಲಸ ಮಾಡದಿದ್ದರೂ, ಆಟವಾಡಿಕೊಂಡು ಇರುತ್ತಾರೆ. ಇತ್ತ ಪೋಷಕರು ಮಾವಿನ ಕಾಯಿಗಳನ್ನು ಲಾರಿಗಳಿಗೆ ತುಂಬುವುದು, ಇಳಿಸುವ ಕೆಲಸದಲ್ಲಿ ಮಗ್ನರಾಗುತ್ತಾರೆ. ಆದರೆ, ಮಕ್ಕಳ ಶಿಕ್ಷಣದ ಬಗ್ಗೆ ಅವರು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ತಿಳಿಯುತ್ತದೆ.

bಇಲ್ಲಿ ಮಕ್ಕಳಿಗೆ ಮಂಡಿಗಳೇ ಆಟದ ಮೈದಾನ ಆಗಿದೆ. ಊಟ, ತಿಂಡಿ, ಮಲಗುವುದು ಎಲ್ಲವೂ ಇಲ್ಲಿಯೇ. ಎಲ್ಲಾ ಮಕ್ಕಳಂತೆ ಶಾಲೆಗಳಲ್ಲಿ ಆಟ ಪಾಠ ಕಲಿಯುತ್ತ ನಲಿದಾಡಬೇಕಾದ ಮಕ್ಕಳು, ಹೀಗೆ ಪೋಷಕರ ಜೊತೆ ಕಾಲ ಕಳೆಯುವುದು ನೋಡಿದ್ರೆ ಇವರ ಮುಂದಿನ ಭವಿಷ್ಯ ಏನೆಂಬುದು ಕುತೂಹಲದ ಪ್ರಶ್ನೆಯಾಗಿದೆ. ಮಕ್ಕಳೆಲ್ಲ ಆಂಧ್ರದವರು: ಮಂಡಿಗಳಲ್ಲಿ ಬಂದಿರುವ ಕೂಲಿ ಕಾರ್ಮಿಕರ ಬಹುತೇಕ ಮಕ್ಕಳು ಆಂಧ್ರಪ್ರದೇಶ ದವರಾ ಗಿದ್ದಾರೆ. ಇದರಲ್ಲಿ ತೆಲುಗು ಮಾತನಾಡುವವರು ಹೆಚ್ಚಾಗಿದ್ದಾರೆ.

ಹಾಗಾಗಿ, ಇವರಿಗೆ ಶಿಕ್ಷಣ ಹೇಗೆಂಬುದು ಹೆತ್ತವರಿಗೂ ಚಿಂತೆಯಿಲ್ಲ, ಇತ್ತ ಸಂಬಂಧಿಸಿದ ಇಲಾಖೆಗಳ ಗಮನವೂ ಅರಿಸುತ್ತಿಲ್ಲ. ಬೇರೆ ಭಾಷಿಗರು ಇಲ್ಲಿ ಇರುವ ಕಾರಣ, ಇವರಿಗೆ ವಿದ್ಯಾಭ್ಯಾಸ ಕೊಡಿಸುವುದಾರರು ಹೇಗೆ ಎನ್ನುವುದು ಶಿಕ್ಷಣ ಪ್ರೇಮಿಗಳ ಪ್ರಶ್ನೆಯಾಗಿದೆ.

Advertisement

ಹೀಗಾಗಿ, ಇಲ್ಲಿ ಬಂದು ಸೀಜನ್‌ ಮುಗಿಯುವ ತನಕ ಮಕ್ಕಳಿಗೆ ಶಿಕ್ಷಣ ಇಲ್ಲದಂತಾಗಿದೆ. ಇನ್ನೊಂದಡೆ ಹೊಟ್ಟೆಪಾಡಿಗೆ ಬಂದಿ ರುವ ಕೂಲಿ ಕಾರ್ಮಿಕರು ಮನೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ, ಅನಿವಾರ್ಯವಾಗಿ ಈ ಮಕ್ಕಳನ್ನು ಕರೆತಂದಿದ್ದಾರೆ. ಅವರು ಸೀಜನ್‌ ಮುಗಿದ ಮೇಲೆಯೇ ಮಕ್ಕ ಳನ್ನು ಜೊತೆಯಲ್ಲಿ ಕರೆದುಕೊಂಡು ತಮ್ಮೂರುಗಳತ್ತ ಹೊರಡುತ್ತಾರೆ.

ಅಲ್ಲಿಯ ತನಕ ಈ ಮಕ್ಕಳಿಗೆ ಶಾಲೆ, ಮನೆ, ಆಟದ ಮೈದಾನ, ಊಟ ತಿಂಡಿ ಎಲ್ಲವೂ ಇಲ್ಲಿಯೇ ನಡೆಯುತ್ತದೆ. ಆದರೆ, ಶಿಕ್ಷಣ ಮಾತ್ರ ಇಲ್ಲದೇ ಇರು ವುದು ವಿಷಾದಕರ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next