Advertisement

ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಬೆಳೆಸಿ

02:14 PM Jun 25, 2018 | Team Udayavani |

ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಕೆ.ಆರ್‌. ಮೋಹನ್‌ಕುಮಾರ್‌ ಹೇಳಿದರು. 

Advertisement

ನಗರದ ಸರ್‌. ಎಂವಿವಿ ವಿಚಾರ ವೇದಿಕೆ ಹಾಗೂ ಅನುಭವ ಟ್ಯುಟೋರಿಯಲ್‌ ವತಿಯಿಂದ ಅಗ್ರಹಾರದ ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಭಾರತದ ಪ್ರಧಾನ ಮಂತ್ರಿಗಳು ಕೃತಿ ಬಿಡುಗಡೆ ಹಾಗೂ ಅನುಭವ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಶಿಕ್ಷಣ ಎಂಬುದು ಕೇವಲ ಅಂಕ ಗಳಿಕೆಗಷ್ಟೇ ಸಮೀತವಾಗಿದ್ದು, ಇದರಿಂದಾಗಿ ಯುವ ಸಮುದಾಯದಲ್ಲಿ ಸಾಮಾನ್ಯ ಜಾnನ, ಮಾನವೀಯ ಮೌಲ್ಯಗಳು ಕುಂಟಿತವಾಗುತ್ತಿರುವುದು ಬೇಸರ ಸಂಗತಿಯಾಗಿದೆ. ಆದರೆ ಯಾವುದೇ ವ್ಯಕ್ತಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಮಾನ್ಯ ಜಾnನ, ಮಾನವೀಯ ಮೌಲ್ಯಗಳು ಅತ್ಯಾವಶಕ ಎಂದು ಹೇಳಿದರು.

ವಿದೇಶದಲ್ಲಿರುವ ಭಾರತೀಯರು ದೇಶದ ಸಂಸ್ಕೃತಿಯನ್ನು ಪಸರಿಸಿರುವ ಮೂಲಕ ಮಾತೃ ಭೂಮಿಯ ಘನತೆ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಅದನ್ನು ಕಣ್ತುಂಬಿಕೊಳ್ಳಲು ಭಾರತಕ್ಕೆ ಭೇಟಿ ನೀಡುವ ವಿದೇಶಿಗರಿಗೆ ವಾಸ್ತವದಲ್ಲಿ ಬೇರೆಯದನ್ನೇ ಕಂಡು ಬೇಸರ ವ್ಯಕ್ತಪಡಿಸುವವರು ಇದ್ದಾರೆ. ಹಾಗಾಗೀ ನಮ್ಮ ದೇಶ, ಭಾಷೆ, ನೆಲದ ಬಗ್ಗೆ ಸಾಮಾನ್ಯ ಜಾnನ ಅಗತ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕ ಕೆ.ರಾಘರಾಂ ವಾಜಪೇಯಿ ಮಾತನಾಡಿ, ಪೋಷಕರು ಮಕ್ಕಳಿಗೆ ಕೇವಲ ಓದಿನ ಬಗ್ಗೆ ಮಾತ್ರ ಆಸಕ್ತಿ ಬೆಳೆಸುವ ಜತೆಗೆ ಆದರ್ಶ ವ್ಯಕ್ತಿಗಳ ವಿಚಾರಗಳನ್ನು ತಿಳಿಸಬೇಕಿದೆ. ಲೇಖಕ ಬಿ.ಎನ್‌.ನರಸಿಂಹ ಅವರು ಕೃತಿಯ ಬಹುತೇಕ ಬರಹಗಳನ್ನು ಮಕ್ಕಳಿಂದಲೇ ಬರೆಸುವ ಮೂಲಕ ಮಕ್ಕಳು ಬರವಣಿಗೆಯಲ್ಲಿ ತೊಡುಗುವಂತೆ ಮಾಡಿದ್ದಾರೆ.

Advertisement

ಆ ಮೂಲಕ ಅಧ್ಯಯನದಲ್ಲಿ ತೊಡಗಿ ವಿಚಾರಗಳನ್ನು ತಿಳಿದುಕೊಳ್ಳಲಿ ಎಂಬುದು ಅವರ ಆಶಯವಾಗಿದೆ ಎಂದರು. ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳೈಆಳ್ವಾರ್‌ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲ ಪೊ›.ನೀ. ಗಿರಿಗೌಡ, ಸಾಹಿತಿ ಉಷಾನರಸಿಂಹ, ಕೃತಿ ಲೇಖಕ ಬಿ.ಎನ್‌.ನರಸಿಂಹ, ವಿ.ನಾರಾಯಣರಾವ್‌ ಇನ್ನಿತರರು ಹಾಜರಿದ್ದರು.

ವಿವಿಧ ಪ್ರಶಸ್ತಿ ಪ್ರಧಾನ: ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಂ.ಆರ್‌.ಮದನ್‌ ಕುಮಾರ್‌, ಯು.ಚಂದ್ರಕಲಾ, ಎಸ್‌.ಚಿತ್ರ, ಆರ್‌.ವಿನಯ್‌ ಅವರಿಗೆ “ಅನುಭವ ಚಿಗುರು’ ಪ್ರಶಸ್ತಿ ನೀಡಲಾಯಿತು.

ಬಳಿಕ ಗೋಪಾಲಸ್ವಾಮಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಆರ್‌.ಆಶಾ, ಎಸ್‌.ನಿವೇದಿತಾ, ಎಸ್‌.ಜ್ಯೋತಿ ಪ್ರಿಯಾ ಅವರಿಗೆ “ಅನುಭವ ಗಿರಿ’ ಪ್ರಶಸ್ತಿಯನ್ನು ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ನಿಖೀತ ಎಸ್‌.ರಾವ್‌, ಎಸ್‌.ಸೌಗಂಧಿನಿ, ಸ್ಕಂದ ವಿ.ಜೋಯಿಸ್‌ ಅವರಿಗೆ “ಅನುಭವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next