Advertisement

ಕರ್ನಾಟಕ ದರ್ಶನಕ್ಕೆ ತೆರಳಿದ ಮಕ್ಕಳು

10:04 AM Jan 18, 2019 | Team Udayavani |

ಕಡೂರು: ಮಕ್ಕಳಲ್ಲಿರುವ ಐತಿಹಾಸಿಕ ಸ್ಥಳಳಗಳ ಮಹತ್ವ, ಇತಿಹಾಸ ಮತ್ತು ಪರಂಪರೆಯ ಜ್ಞಾನಾರ್ಜನೆ ಹೆಚ್ಚಿಸುವ‌ ಹಿನ್ನ್ನೆಲೆಯಲ್ಲಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುತ್ತಿದೆ ಎಂದು ಜಿಪಂ ಸದಸ್ಯೆ ಕಾವೇರಿ ಲಕ್ಕಪ್ಪ ತಿಳಿಸಿದರು.

Advertisement

ಕಡೂರು ಶೈಕ್ಷಣಿಕ ವಲಯದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಕಾರದಿಂದ ಆಯೋಜಿಸಿರುವ ಮಕ್ಕಳ ಪ್ರವಾಸವಾಗಿದೆ. ಶೈಕ್ಷಣಿಕ ವಲಯದಿಂದ ಪ್ರತಿ ಶಾಲೆಗಳಿಂದ ಮಕ್ಕಳನ್ನು ಆಯ್ಕೆ ಮಾಡಿ ಸಮವಸ್ತ್ರ, ಪ್ರವಾಸದ ಪರಿಕ‌ರಗಳಿರುವ ಕಿಟ್ ವಿತರಿಸಿ ಪ್ರವಾಸಕ್ಕೆ ಕಳುಸಲಾಗುತ್ತಿದೆ. ಮಕ್ಕಳು ನಮ್ಮ ರಾಜ್ಯದ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಸಂದರ್ಶಿಸುವ ಮುಖೇನ ತಮ್ಮ ಪಠ್ಯ ಚಟುವಟಿಕೆಗಳಲ್ಲಿರುವ ಕ್ಷೇತ್ರಗಳಿಗೂ ಭೇಟಿ ನೀಡುವುದರಿಂದ ಮಕ್ಕಲ್ಲಿರುವ ಕುತೂಹಲಕ್ಕೆ ಉತ್ತರ ಸಿಗಲಿದೆ. ಅಲ್ಲದೆ ನಾಡಿನ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಶೈಕ್ಷಣಿಕವಾಗಿ ಇನ್ನಷ್ಟು ಜ್ಞಾನಾಜ್ಞರ್ನೆ ಹೆಚ್ಚಿಸುವಲ್ಲಿ ಈ ಪ್ರವಾಸ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಕ್ಕಳಿಗೆ ಪ್ರವಾಸದಲ್ಲಿ ತೊಂದರೆಯಾಗದಂತೆ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ ಮಾತನಾಡಿ, 100 ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಮಕ್ಕಳಿಗೆ ಪ್ರವಾಸ ದರ್ಶನದಲ್ಲಿ ತೊಂದರೆಯಾಗದಂತೆ ಸಂಪನ್ಮೂಲ ವ್ಯಕ್ತಿ, ಶಿಕ್ಷಕರು ಹಾಗು ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶದಂತೆ ಈ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗಿದೆ. ಈ ಪ್ರವಾಸದಲ್ಲಿ ಒಟ್ಟು 1500 ಕಿ.ಮೀ. ಕ್ರಮಿಸಲಿದ್ದು ಪುಣ್ಯ ಕ್ಷೇತ್ರಗಳು ಹಾಗೂ ಐತಿಹಾಸಿಕ ಕ್ಷೇತ್ರಗಳ್ನು ಸಂದರ್ಶಿಸಿ ಮಕ್ಕಳಿಗೆ ಶಿಕ್ಷಕರಿಂದ ಸ್ಥಳ ಮಾಹಿತಿ, ಇತಿಹಾಸ ತಿಳಿಸಿ ಮಕ್ಕಳ ಕುತೂಹಲ ನಿವಾರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next