Advertisement

ಮಕ್ಕಳ ಮೇಲೆ ಹೇರಿಕೆ ಸಲ್ಲದು: ಚಿನ್ನಪ್ಪ ಗೌಡ

09:51 AM Nov 18, 2017 | |

ಅತ್ತಾವರ: ಮಕ್ಕಳಿಗೆ ಅನುಭವಿಸಿ ಕಲಿಯುವುದಕ್ಕೆ ಪೂರಕ ವಾತಾವರಣವನ್ನು ಹೆತ್ತವರು ಕಲ್ಪಿಸಿಕೊಡಬೇಕು. ಯಾವುದೇ ವಿಚಾರವನ್ನು ಹೇರಿಕೆ ಮಾಡಬಾರದು ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಹೇಳಿದರು.

Advertisement

ಸರೋಜಿನಿ ಮಧುಸೂದನ್‌ ಕುಶೆ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಎರಡು ದಿನ ಕಾಲ ನಡೆಯುವ ‘ಸರೋಜ್‌ ಮಧು ಕಲಾ ಉತ್ಸವ್‌-2017’ ಅಂತರ್‌ ಶಾಲಾ ಕಾಲೇಜು ಸ್ಪರ್ಧೆಯನ್ನು ಅವರು ಶುಕ್ರವಾರ ಉದ್ಘಾಟಿಸಿದರು.

ಮಾತಿಗಿಂತ ಹೆಚ್ಚು ತೆರೆದ ಕಣ್ಣು, ತೆರೆದ ಕಿವಿ ಮತ್ತು ಸಹೃದಯ ಇರಬೇಕು. ಅಂತಹ ವ್ಯಕ್ತಿತ್ವ ಬೆಳೆಸಲು ಮಕ್ಕಳಿಗೆ ಅವಕಾಶ ಸೃಜಿಸಬೇಕು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅನುಭವಗಳು ಸಿಗುತ್ತಿದ್ದು, ಅವುಗಳು ನೆನಪಾಗಿ ಉಳಿದು ಭರವಸೆಗೆ ದಾರಿದೀಪವಾಗಬೇಕು. ಭರವಸೆಗಳೇ ಹೊಸ ಕನಸುಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.

ಪಿವಿಎಸ್‌ ಗ್ರೂಪ್‌ ಅಧ್ಯಕ್ಷೆ ಮತ್ತು ಎಂಡಿ ಸರೋಜಿನಿ ಎಂ. ಕುಶೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಟೂನ್ ಕಲಾವಿದ ಜಾನ್‌ ಚಂದ್ರನ್‌ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೆ. ವಿ. ವಾಸುದೇವ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೆ. ಕೆ. ಉಪಾಧ್ಯಾಯ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next