Advertisement

ಮುಂಬಯಿ ಮಹಿಳೆಯರು, ಮಕ್ಕಳಿಗೆ ಸುರಕ್ಷಿತವಲ್ಲ?

04:04 PM Jan 19, 2019 | Team Udayavani |

ಮುಂಬಯಿ: ಮುಂಬಯಿಯನ್ನು ಮಹಿಳೆಯರಿಗೆ ಸುರಕ್ಷಿತವಾದ ನಗರವೆಂದು ಪರಿಗಣಿಸ ಲಾಗುತ್ತದೆ, ಆದರೆ ಇದೀಗ ದೇಶದ ವಾಣಿಜ್ಯ ರಾಜಧಾ ನಿಯು ದಿಲ್ಲಿಯಂತೆಯೇ ಮತ್ತೂಂದು ಅಸುರಕ್ಷಿತ ನಗರವಾಗುವ ಕಡೆಗೆ ಸಾಗುತ್ತಿದೆ. ನಗರವು ಕಳೆದ 5 ವರ್ಷಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಕಳವಳಕಾರಿ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ. ವಾಸ್ತವವಾಗಿ, ನಗರದಲ್ಲಿ ಅತ್ಯಾಚಾರ ಪ್ರಕರಣಗಳು ದ್ವಿಗುಣಗೊಂಡಿವೆ.  ಆರ್‌ಟಿಐ ಕಾರ್ಯ ಕರ್ತ ಶಕೀಲ್‌ ಅಹ್ಮದ್‌ ಶೇಖ್‌ ಅವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ಯೊಂದಕ್ಕೆ ಪ್ರತಿಕ್ರಿಯೆಯಾಗಿ ಮುಂಬಯಿ ಪೊಲೀಸರು ಒದಗಿಸಿದ ಮಾಹಿತಿಯಲ್ಲಿ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

Advertisement

ಲಭ್ಯವಾಗಿರುವ ಮಾಹಿತಿಯ ಪ್ರಕಾರ, 2013ರಲ್ಲಿ ನಗರವು 388 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಆದರೆ, 2017ರಲ್ಲಿ ಈ ಸಂಖ್ಯೆಯು ಮುಂಬಯಿಯಾದ್ಯಂತ ಇಂತಹ 751 ಪ್ರಕರಣಗಳು ವರದಿಯಾಗು ವುದರೊಂದಿಗೆ ದ್ವಿಗು ಣಗೊಂಡಿದೆ. ನಗರ ದಲ್ಲಿ ಅಪ್ರಾಪ್ತ ವಯಸ್ಕರು ಕೂಡ ಸುರಕ್ಷಿತವಾಗಿಲ್ಲ. 2018ರ ಮೊದಲ 9 ತಿಂಗಳಲ್ಲೇ ಪೋಕೊÕà ಕಾಯಿದೆಯ ಅಡಿಯಲ್ಲಿ ಒಟ್ಟು 842 ಪ್ರಕರಣಗಳು ದಾಖಲಾಗಿವೆ. ಅಂಕಿಅಂಶಗಳ ಪ್ರಕಾರ ಮುಂಬಯಿಯಲ್ಲಿ 2013ರ ನವೆಂಬರ್‌ನಿಂದ 2018ರ ತನಕ 4,046 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 

ಮುಂಬಯಿ ಪೊಲೀಸ್‌ ವೆಬ್‌ಸೈಟ್‌ನಲ್ಲಿ ನೀಡಲಾ ಗಿರುವ  ಮಾಹಿತಿಯ ಪ್ರಕಾರ 2018ರಲ್ಲಿ ಜನವರಿಯಿಂದ ಸೆಪ್ಟಂಬರ್‌ ತನಕ ಒಟ್ಟು 651 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ನಗರದಲ್ಲಿ 2018ರಲ್ಲಿ ನವೆಂಬರ್‌ ತನಕ 2,401 ಲೈಂಗಿಕ ಕಿರುಕುಳದ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next