Advertisement

ಬೆಂಗಳೂರು ಹಸಿರಾಗಿಸಲುಪಣ ತೊಟ್ಟ ಮುದ್ದು ಮಕ್ಕಳು

12:58 PM Nov 27, 2017 | Team Udayavani |

ಬೆಂಗಳೂರು: ಅಲ್ಲಲ್ಲಿ ಪುಟಾಣಿ ಮಕ್ಕಳ ಕಲರವ. ಆಗಸದಲ್ಲಿ ಆಗಾಗ ಇಣುಕುತ್ತಿದ್ದ ಸೂರ್ಯ, ಹಸಿರುಡುಗೆ ತೊಟ್ಟು ಕಂಗೊಳಿಸುತ್ತಿದ್ದ ಮಹಿಳೆಯರು, ಹಸಿರುಳಿಸಿ ಗೀತೆಗಳಿಗೆ ಕುಣಿದು ಕುಪ್ಪಳಿಸಿದ ಚಿಣ್ಣರು. ಹಸಿರು ತನವೇ ಮೇಳೈಸಿದ ಮೈದಾನದ ತುಂಬೆಲ್ಲಾ ಚಪ್ಪಾಳೆಯ ಹೊನಲು… ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದು,ª ಅದಮ್ಯ ಚೇತನ ಸಂಸ್ಥೆ ನೂರನೇ ಹಸಿರು ಭಾನುವಾರದ ಅಂಗವಾಗಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ
ಆಯೋಜಿಸಿದ್ದ ಬೃಹತ್‌ ಹಸಿರು ಸಮಾರಂಭ.

Advertisement

“ಮನೆಗೊಂದು ಮರ, ಊರಿಗೊಂದು ವನ’, “ಪರಿಸರ ಹಚ್ಚಹಸಿರು, ಎಲ್ಲರ ಬದುಕು ಉಸಿರು’ ಎಂಬ ಹಸಿರು
ಫ‌ಲಕಗಳನ್ನು ಹಿಡಿದಿದ್ದ ಪುಟಾಣಿಗಳು, “ಉಸಿರಾಗಲಿ ಹಸಿರು’ ಎಂಬ ಘೋಷಣೆ ಮೊಳಗಿಸಿ ಹಸಿರು ಕ್ರಾಂತಿಗೆ ಪಣ 
ತೊಟ್ಟರು. ಬೀದಿ ನಾಟಕ ಮತ್ತು ಕ್ರಾಂತಿ ಗೀತೆಗಳ ಮೂಲಕ ನೆರೆದವರಿಗೆ ಹಸಿರುಳಿಸುವ ಬಗ್ಗೆ ತಿಳುವಳಿಕೆ ನೀಡಿದರು.

ಬೆಳಗ್ಗೆ ಕಾಲೇಜುಗಳಲ್ಲಿ ಗಿಡ ನೆಟ್ಟ ನಾರಾಯಣ ಹೃದಯಾಲಯ ವೈದ್ಯಕೀಯ ಕಾಲೇಜು, ಸಂಜಯ್‌ ಗಾಂಧಿ
ಕಾಲೇಜು, ನೈಸ್‌ ಸಂಸ್ಥೆ, ಗ್ರೀನ್‌ ಸ್ಟೇಜ್‌, ಆಲಾಪನ ತಂಡ ಹಾಗೂ ಬನ್ನೇರು ಘಟ್ಟದ ಶಿವಳ್ಳಿ ಶಾಲೆಯ ವಿದ್ಯಾರ್ಥಿಗಳು
ನಂತರ ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಗಳೂರನ್ನು ಹಸಿರಾಗಿಸುವ ಪಣ ತೊಟ್ಟ ರು. ಚಿತ್ರನಟ ಸುದೀಪ್‌ ಸೇರಿದಂತೆ ಹಲವು ಗಣ್ಯರು ತಮ್ಮ ಮನೆಯಲ್ಲಿಯೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದು ವಿಶೇಷ.

ಜನಾಂದೋಲನವಾಗಲಿ: ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಅನಂತ್‌ ಕುಮಾರ್‌, ಗಾಂಧೀಜಿ ಅವರ ಚಂಪಾರಣ್ಯ ಸತ್ಯಾಗ್ರಹ ಈ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.  ಪ್ರಧಾನಿ ನರೇಂದ್ರ ಮೋದಿ ಅವರು ಹಸಿರುಕರಣಕ್ಕೆ ಪಣ ತೊಟ್ಟಿದ್ದಾರೆ. ಅದಮ್ಯ ಚೇತನ ಸಂಸ್ಥೆ ಬೆಂಗಳೂರಿನಲ್ಲಿ ಈಗಾಗಲೇ ಒಂದು ವರೆಲಕ್ಷ ಗಿಡಗಳನ್ನು ನೆಟ್ಟಿದ್ದು, 1 ಕೋಟಿ ಗಿಡ ನಡುವ ಉದ್ದೇಶವನ್ನಿಟ್ಟುಕೊಂಡಿದೆ ಎಂದು ತಿಳಿಸಿದರು. 

ಪ್ರತಿಯೊಬ್ಬ ಮನುಷ್ಯನಿಗೆ ಉಸಿರಾಡಲು 7 ಮರಗಳ ಅವಶ್ಯಕತೆ ಇದೆ. ಆದರೆ ಬೆಂಗಳೂರಿನಲ್ಲಿ 1 ಕೋಟಿ
ಜನರಿಗೆ ಕೇವಲ 14 ಲಕ್ಷ ಮರಗಳು ಉಳಿದಿವೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಸಸ್ಯಾಗ್ರಹ ಒಂದು ದೊಡ್ಡ
ಜನಾಂದೋಲನವಾಗಲಿದೆ. ಮುಂದೆ ಇದು ಭಾರತೀಯರ ಆಂದೋಲವಾಗಲಿ ಎಂದು ಆಶಿಸಿದರು. ಸಂಸದ ಪಿ.ಸಿ.ಮೋಹನ್‌, ಮಾಜಿ ಸಚಿವ ಆರ್‌, ಅಶೋಕ್‌, ರಾಮಚಂದ್ರೇಗೌಡ, ಶಾಸಕ ವಿಜಯ್‌ ಕುಮಾರ್‌, ಪಾಲಿಕೆ ಸದಸ್ಯ ನಾಗರಾಜ್‌ ಮತ್ತಿತರರಿದ್ದರು.

Advertisement

130 ಸ್ಥಳಗಳಲ್ಲಿ ಗಿಡ ನೆಟ್ಟು ಬೆಂಬಲ
ನೂರನೇ ಹಸಿರು ಭಾನುವಾರದ ಹಿನ್ನೆಲೆಯಲ್ಲಿ ಅಮೆರಿಕ, ಅಹದಾಬಾದ್‌, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ಒಟ್ಟು 130 ಸ್ಥಳಗಳಲ್ಲಿ ಅತ್ತಿ, ಆಲ, ಬೇವು, ಹುಣಸೆ, ಸಂಪಿಗೆ, ಸೇವಂತಿಗೆ, ಅರಳಿ ಗಿಡ ಸೇರಿದಂತೆ ಹಲವು ಜಾತಿಯ ಸಸಿಗಳನ್ನು ನೆಡಲಾಗಿದೆ. ಇಡೀ ಬೆಂಗಳೂರನ್ನು ಹಸರೀಕರಣ ಮಾಡುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆ ಹೆಜ್ಜೆ ಇಟ್ಟಿದ್ದು, ಇದಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಕಡೆಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್‌ ಕುಮಾರ್‌ ಹೇಳಿದರು. ಹಸಿರು ಕ್ರಾಂತಿಗೆ ಪಣತೊಟ್ಟ ಅದ್ಯಚೇತನ ಸಂಸ್ಥೆಗೆ ಬೆಂಬಲಿಸಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ, ಚಿತ್ರ ನಟ ಸುದೀಪ್‌ ಸೇರಿದಂತೆ ಹಲವು ದಿಗ್ಗಜರು ಸಸಿನೆಟ್ಟು ನೀರೆರೆದಿದ್ದು ಮತ್ತೂಂದು ವಿಶೇಷ.

ಹಲವು ಪ್ರದೇಶಗಳಲ್ಲಿ ಈಗ ಕಾಡು ನಾಶವಾಗಿ ಹೋಗಿದ್ದು ಮುಂದೊಂದು ದಿನ ಉಸಿರಾಟಕ್ಕೂ ಗಾಳಿಸಿಗದಂತ ವಾತಾವರಣ ನಿರ್ಮಾಣ ವಾಗಬಹುದು. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳ ಬೇಕು. ಹೀಗಾಗಿ ಈ ಕಾರ್ಯ ಕ್ರಮಕ್ಕೆ ಕೈ ಜೋಡಿಸಿದ್ದೇವೆ.
 ಭವ್ಯ, ಶಿವಳ್ಳಿ ಶಾಲೆ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next