Advertisement
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೊಣಂಗೇರಿ ನಿವಾಸಿ ಮಲ್ಲಿಗೆ ಎಂಬಾಕೆ ತನ್ನ ಎರಡು ಮಕ್ಕಳೊಂದಿಗೆ ಮೈಸೂರಿಗೆ ಆಗಮಿಸಿದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಉದ್ಯಾನಕ್ಕೆ ಬಂದ ಕುಳಿತ ಆಕೆ ನೋವಿನಿಂದ ಒದ್ದಾಡುವುದನ್ನು ಕಂಡು ಜನರು ಗುಂಪಾಗಿದ್ದಾರೆ. ಇತ್ತ ತಾಯಿಯ ಹೆರಿಗೆ ನೋವನ್ನು ಅರಿಯದ ಪುಟ್ಟ ಮಕ್ಕಳಿಬ್ಬರುತಾಯಿಯೊಂದಿಗೆ ಅಳಲಾರಂಭಿಸಿವೆ. ಇದೇವೇಳೆಗೆ ಕರ್ತವ್ಯಕ್ಕೆ ತೆರಳುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕಿಯೋರ್ವರು ಜನರು ಗುಂಪುಗೂಡಿರುವುದನ್ನು ಕಂಡು ಸ್ಥಳಕ್ಕೆ ತೆರಳಿದ್ದಾರೆ. ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ, ಆಕೆಗೆಹೆರಿಗೆ ನೋವು ಮತ್ತಷ್ಟು ಹೆಚ್ಚಾದ ಪರಿಣಾಮ ಸ್ಥಳದಲ್ಲೇ ವೈದ್ಯರ ಸಲಹೆಯಂತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.
Related Articles
Advertisement
ಇದೇ ಮೊದಲ ಬಾರಿಗೆ ಹೆರಿಗೆ ಮಾಡಿಸಿದ್ದು: ಶಿಕ್ಷಕಿ :
ನಾನು ಹೆರಿಗೆ ಮಾಡಿಸಿದ್ದು ಇದೇ ಮೊದಲು. ಆರಂಭದಲ್ಲಿ ಭಯವಾಗಿತ್ತು. ವೈದ್ಯರು ನನಗೆ ಧೈರ್ಯ ತುಂಬಿದರು. ಇಂದು ಶಾಲೆಗೆತಡವಾಗಿ ಹೋಗಿರುವುದಕ್ಕೆ ಯಾವುದೇಬೇಸರವಿಲ್ಲ. ಎರಡು ಜೀವಗಳನ್ನು ಉಳಿಸಿದ್ದಕ್ಕೆ ಸಂತಸವಾಗುತ್ತಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಕುಮಾರಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಇವರು ನಂಜನಗೂಡು ತಾಲೂಕು ನವಿಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತುರ್ತು ಸಂದರ್ಭದಲ್ಲಿ ಸರಿಯಾಗಿ ಹೆರಿಗೆ ಮಾಡಿಸಿದ್ದರಿಂದ ತಾಯಿ ಮಗು ಸುರಕ್ಷಿತವಾಗಿದ್ದಾರೆ.ಹೆರಿಗೆ ಬಳಿಕ ಮಹಿಳೆ ನಿತ್ರಾಣಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಮತ್ತಿಬ್ಬರು ಮಕ್ಕಳಿಗೆ ಆಹಾರ ನೀಡಿದ್ದು, ತಾಯಿಯೊಂದಿಗಿದ್ದಾರೆ. ತಾಯಿ ಕಾರ್ಡ್‌ನಲ್ಲಿದ್ದ ಮಹಿಳೆಯ ಸಹೋದರನ ಮೊಬೈಲ್ ನಂಬರ್‌ಗೆ ಕಡೆ ಮಾಡಿ ಹೆರಿಗೆಯ ಮಾಹಿತಿ ನೀಡಲಾಗಿದೆ. – ಡಾ.ಪ್ರಮೀಳಾ, ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ