Advertisement

ರಕ್ಷಣಾ ಘಟಕದಿಂದ ಬಾಲ್ಯ ವಿವಾಹಕ್ಕೆ ಬ್ರೇಕ್‌

04:30 PM Jun 17, 2021 | Team Udayavani |

ಧಾರವಾಡ: ನಾಲ್ವರು ಅಪ್ರಾಪ್ತೆಯರ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತಡೆ ಹಿಡಿಯಲಾಗಿದೆ.

Advertisement

ಜೂ. 15ರಂದು ನಗರದ ಕೆಲಗೇರಿ ಬಾಲಕಿಯ ವಿವಾಹವು ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದ ಯುವಕನ ಜತೆ, ಧಾರವಾಡ ತಾಲೂಕಿನ ಚಂದನಮಟ್ಟಿಯ ಬಾಲಕಿಯ ವಿವಾಹವು ಅದೇ ಗ್ರಾಮದ ಯುವಕನ ಜತೆ, ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಒಂದೇ ಕುಟುಂಬದ ಇಬ್ಬರು ಬಾಲಕಿಯರ ವಿವಾಹವನ್ನು ಅದೇ ಗ್ರಾಮದ ಯುವಕರ ಜತೆ ನಿಶ್ಚಿಯಿಸಲಾಗಿತ್ತು. ಮಕ್ಕಳ ಸಹಾಯವಾಣಿ ಮಾಹಿತಿ ಮೇರೆಗೆ ನಾಲ್ಕೂ ಬಾಲ್ಯವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾಘಟಕದಿಂದ ತಡೆ ಹಿಡಿಯಲಾಗಿದೆ.

ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ನೇತೃತ್ವದ ತಂಡವು ಈ ಎಲ್ಲ ಪೋಷಕರ ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿತು. ಬಾಲಕಿಯರಿಗೆ ಆಪ್ತ ಸಮಾಲೋಚನೆ ಮಾಡಿ ನಂತರ ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕೋವಿಡ್‌ ಪ್ರಯುಕ್ತ ಆನ್‌ಲೈನ್‌ ಮೂಲಕ ನಡೆಯುವ ಮಕ್ಕಳ ಕಲ್ಯಾಣ ಸಮಿತಿ ತೆಗೆದುಕೊಳ್ಳುವ ಸಭೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಯಿತು. ಗ್ರಾಪಂ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬಾಲಕಿಯರ ಕುಟುಂಬದ ಮೇಲೆ ನಿಗಾ ಇಡುವಂತೆ ತಿಳಿಸಲಾಯಿತು.

ಸಮಾಜ ಕಾರ್ಯಕರ್ತರಾದ ಶ್ವೇತಾ ಕಿಲ್ಲೇದಾರ, ಕರೇಪ್ಪ ಕೌಜಲಗಿ, ಕ್ಷೇತ್ರ ಕಾರ್ಯಕರ್ತರಾದ ಮಹಮ್ಮದಲಿ ತಹಶಿಲ್ದಾರ್‌, ಭಾರತಿ ಬಂಡಿ, ಶಿಶು ಅಭಿವೃದ್ಧಿ  ಯೋಜನಾಧಿ  ಕಾರಿ ವೀಣಾ ಎಂ., ಅನುಪಮಾ ಅಂಗಡಿ, ಕಮಲಾ ಬೈಲೂರ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next