ಯಾದಗಿರಿ: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಪೋಷಕರು ತಮ್ಮ ಮಕ್ಕಳು ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಬೇಕು ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಜಗನ್ನಾಥ ಜಮಾದಾರ ಹೇಳಿದರು.
ಗುರುಮಠಕಲ್ ತಾಲೂಕು ಇಡೂರಿನಲ್ಲಿ ಜಿಲ್ಲಾ ಟೋಕ್ರೆ ಕೋಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಹಾಗೂ ಕಾರ್ಮಿಕರ ಕಾನೂನು ಸೌಲಭ್ಯಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಈ ಕುರಿತು ಇರುವ ಕಾನೂನುಗಳನ್ನು ತಿಳಿದು ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕಾನೂನು ಜಾರಿಗೊಳಿಸಿ ಸೌಲಭ್ಯ ನೀಡುತ್ತಿದೆ.
ಈ ಭಾಗದಲ್ಲಿ ಕಾರ್ಮಿಕರ ಮುಖಂಡರು ಎಂದು ಹೇಳಿಕೊಂಡು ಶೋಷಣೆ ಮಾಡುತ್ತಿದ್ದಾರೆ. ಅಂತಹ ವಂಚಕರನ್ನು ನಂಬಬಾರದು. ಹೀಗಾದಲ್ಲಿ ನಿಮ್ಮ ಭಾಗದ ಪೊಲೀಸ್ ಠಾಣೆಗೆ ದೂರು ನೀಡಿ ವಂಚನೆಯಿಂದ ಪಾರಾಗಬೇಕು. ಸೌಲಭ್ಯಗಳನ್ನು ತಿಳಿದುಕೊಂಡು ಸವಲತ್ತು ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು.
ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಭವಿಷ್ಯ ಉತ್ತಮಗೊಳಿಸಬೇಕು ಹೇಳಿದರು. ಚನ್ನಪ್ಪ, ಗೋವಿಂದ, ಅಂಜಪ್ಪ, ಕ್ರಿಷ್ಣಪ್ಪ, ನಿಂಗಣ್ಣ, ಶಂಕ್ರಪ್ಪ, ಶೇಖರ, ಅಮೀರ್ ಅಲಿ, ಸುಜಾತ, ಶಿವಪ್ಪ, ಅಶೋಕ, ಹೊನ್ನಪ್ಪ, ಮಲ್ಲೇಶ, ಶಂಕ್ರಪ್ಪ, ಬನ್ನಪ್ಪ ಇದ್ದರು.