Advertisement

ಹುಣಸೂರು :ಬಾಲ್ಯವಿವಾಹ, ಅಸ್ಪೃಶ್ಯತೆ ಬಗ್ಗೆ ಹಾಡಿ-ಕಾಲೇಜುಗಳಲ್ಲಿ ಜಾಗೃತಿ

12:27 PM Apr 07, 2022 | Team Udayavani |

ಹುಣಸೂರು : ಹನಗೋಡು ಭಾಗದಲ್ಲಿ ಬಾಲ್ಯವಿವಾಹ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕಿಡಿಗೇಡಿಗಳ ಮಟ್ಟಹಾಕಲು ಕಠಿಣ ಕ್ರಮವಹಿಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ತಿಳಿಸಿದರು.

Advertisement

ಬುಧವಾರ ಸಂಜೆ ಗ್ರಾಮಾಂತರ ಪೊಲೀಸ್‌ಠಾಣಾ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದ ಅವರು ಹನಗೋಡು ಭಾಗದಲ್ಲಿ ಆದಿವಾಸಿಗಳು ಹೆಚ್ಚಿದ್ದು, ಬಾಲ್ಯ ವಿವಾಹ ಹೆಚ್ಚಿದೆ ಹಾಗೂ ಇಲ್ಲಿನ ಶಾಲಾ-ಕಾಲೇಜು ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರಿದ್ದು, ಅಸ್ಪೃಶ್ಯತೆ ನಿವಾರಣೆ ಸಂಬಂಧ ಉಪನ್ಯಾಸ ಮತ್ತು ಬೀದಿ ನಾಟಕದ ಮೂಲಕ ಕಾಯ್ದೆ ಮತ್ತು ರಕ್ಷಣೆ ಕುರಿತು ಜಾಗೃತಿ ಮೂಡಿವ ಜೊತೆಗೆ ಕಿಡಿಗೇಡಿಗಳ ಮೇಲೆ ನಿಗಾ ಇಡಲಾಗುವುದು.

ಹನಗೋಡಿನ ಔಟ್‌ಪೋಸ್ಟ ನ್ನು ಕಾಯಂಗೊಳಿಸಲು ಕ್ರಮವಹಿಸಲಾಗುವುದು. ಗದ್ದಿಗೆ ಭಾಗಕ್ಕೆ ಔಟ್‌ಪೋಸ್ಟ್ ಬೇಡಿಕೆ ಇದೆ. ಗದ್ದಿಗೆ ಹಾಗೂ ಕಟ್ಟೆಮಳಲವಾಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.

112 ಕ್ಕೆ ದೂರು ನೀಡಿ

ಗ್ರಾಮಗಳಲ್ಲಿ ಗಾಂಜಾಬೆಳೆ, ಅಕ್ರಮ ಮದ್ಯ ಮಾರಾಟ, ಗಲಾಟೆ, ಘರ್ಷಣೆ, ಮೋಟಾರ್-ಸ್ಟಾಟರ್, ಜಾನುವಾರುಗಳ ಕಳ್ಳತನ ಮತ್ತಿತರ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ೧೧೨ಕ್ಕೆ ಕರೆಮಾಡಿದಲ್ಲಿ ತಕ್ಷಣ ಸ್ಪಂದಿಸಲು ಸಾದ್ಯ, ಅಲ್ಲದೆ ಠಾಣೆಗಳಲ್ಲಿ ಸಿಬ್ಬಂದಿಗಳು ಅನುಚಿತವಾಗಿ ನಡೆದುಕೊಂಡಲ್ಲಿ ಮೇಲ್ಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿರೆಂದು ಸಲಹೆ ನೀಡಿದರು.

Advertisement

ಒಕ್ಕಣೆ ತಡೆಗೆ ಕ್ರಮ

ರಸ್ತೆಗಳಲ್ಲಿ ಒಕ್ಕಣೆ ಮಾಡುವುದನ್ನು ತಡೆಗಟ್ಟಲಾಗುವುದು. ಹೆಚ್ಚು ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು.

ದೂರು ಪೆಟ್ಟಿಗೆ

ಎಲ್ಲಾ ಶಾಲಾ ಕಾಲೇಜುಗಳಲ್ಲಿ ದೂರು ಪೆಟ್ಟಿಗೆ ಇಡುವಂತೆ ಆಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸುವಂತೆ ಇನ್ಸ್ಪೆಕ್ಟರ್‌ಗಳಿಗೆ ಸೂಚಿಸಿದರು.

ವಾಹನಗಳ ಮೇಲೆ ಕ್ರಮವಾಗಲಿ

ಹನಗೋಡು ಸೊಸೈಟಿ ಅಧ್ಯಕ್ಷ ಹನುಮ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಚಾಲನಾ ಪರವಾನಗಿ, ವಿಮೆ ಇಲ್ಲದ ಟ್ರ್ಯಾಕ್ಟರ್, ಆಟೋ ಹಾಗೂ ದ್ವಿಚಕ್ರವಾಹನಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕೆಂದು ಹಾಗೂ ದಲಿತ ಮುಖಂಡ ನಿಂಗರಾಜಮಲ್ಲಾಡಿ ಆಗಾಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಸ್.ಸಿ-ಎಸ್.ಟಿ.ಕುಂದುಕೊರತೆ ಸಭೆಯನ್ನು ನಡೆಸುವಂತೆ ಕೋರಿದರು.

ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ಗಣಪತಿ, ತಗಡಯ್ಯ, ಹೊಂಬೇಗೌಡ, ಮಹದೇವ್, ತೊಂಡಾಳುಶAಕರ್, ಮಹದೇವಮ್ಮ, ನಾಗೇಶ್, ಗಜೇಂದ್ರ, ಇಮ್ನಿಯಾಜ್‌ ಪಾಷಾ, ಪ್ರಕಾಶ್ ಸೇರಿದಂತೆ ಅನೇಕರು ಸಮಸ್ಯೆಗಳನ್ನು ಪ್ರತಿಬಿಂಬಿಸಿದರು. ಡಿವೈಎಸ್‌ಪಿ ರವಿಪ್ರಸಾದ್, ಇನ್ಸ್ಪೆಕ್ಟರ್‌ಗಳಾದ ರವಿ,ಚಿಕ್ಕಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next