Advertisement

ಹೊನ್ನಾವರ : ತಾಯಿ ಜೊತೆ ಬಂದಿದ್ದ ಮಗು ನದಿ ಪಾಲು

08:47 PM Aug 01, 2021 | Team Udayavani |

ಕಾರವಾರ: ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರು ಪಾಲು ಆಗಿರುವ ಘಟನೆ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ನಡೆದಿದೆ.

Advertisement

ಹಡಿನಬಾಳ ಗ್ರಾಮದ ಹಾಡಗೇರಿಯ ಶೃತಿ ರಮೇಶ ನಾಯ್ಕ ಇವರು ಮನೆ ಸಮೀಪದ ಗುಂಡಬಾಳ ನದಿ ತೀರದಲ್ಲಿ ಬಟ್ಟೆ ತೊಳೆಯಲು ಆಗಮಿಸಿದ್ದರು. ತಾಯಿಯೊಂದಿಗೆ ಆಗಮಿಸಿದ ಒಂದುವರೆ ವರ್ಷದ ಕಾರ್ತಿಕ ನಾಯ್ಕ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಹೊನ್ನಾವರ ಪೋಲಿಸ್ ಠಾಣೆಯ ಸಿಪಿಐ ಶ್ರೀಧರ ಎಸ್.ಆರ್ ಹಾಗೂ ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ಹೊನ್ನಾವರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next