Advertisement

ಸಾಯಿ ಮಂದಿರದಲ್ಲಿ ಗುರು ಪೌರ್ಣಿಮೆ

03:50 PM Jul 10, 2020 | Naveen |

ಚಿಕ್ಕಮಗಳೂರು: ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕ ಗುರು ಪೌರ್ಣಮೆಯನ್ನು ಗುರುವಾರ ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

Advertisement

ಉತ್ಸವದ ಪ್ರಯುಕ್ತ ಬೆಳಗ್ಗೆ ಬಾಬಾ ಅವರ ವಿಗ್ರಹಕ್ಕೆ ಕಾಕಡಾರತಿ, ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ನಡೆಯಿತು. ನಂತರ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಮಧ್ಯಾಹ್ನ ವಿಶೇಷ ಆರತಿ, ಮಹಾಮಂಗಳಾರತಿ ಜರುಗಿತು. ಸಂಜೆ ಧೂಪಾರತಿ, ಶೇಜಾರತಿ ನಡೆದವು. ಭಕ್ತರಿಂದ ಭಜನೆ, ನಾಮಸಂಕೀರ್ತನೆ, ಸ್ತ್ರೋತ್ರ ಪಠಣ ನಡೆಯಿತು.

ಗುರು ಪೌರ್ಣಮೆ ಪ್ರಯಕ್ತ ಶ್ರೀ ಸಾಯಿಬಾಬಾ ಅವರ ಮೂಲ ವಿಗ್ರಹದ ಪಾದಸ್ಪರ್ಶಕ್ಕೆ ಅವಕಾಶವಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಬಾಬಾ ಅವರ ಪಾದಸ್ಪರ್ಶಿಸಿ ಧನ್ಯತಾ ಭಾವ ಮೆರೆದರು. ಮಂದಿರದ ಮುಖ್ಯಟ್ರಸ್ಟಿ ಜಿ.ಎನ್‌. ಆನಂದಸಾಯಿ ಮಾತನಾಡಿ, ಪ್ರತಿವರ್ಷ ಗುರು ಪೌರ್ಣಮೆ ಮಹೋತ್ಸವವನ್ನು ಸಹಸ್ರಾರು ಭಕ್ತರೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next