Advertisement

ಕಂಟೇನ್ಮೆಂಟ್‌ಗೆ ಘಟನಾ ಕಮಾಂಡರ್‌ ನೇಮಕ

01:08 PM Jun 22, 2020 | Naveen |

ಚಿಕ್ಕಮಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್‌-19 ಸೋಂಕು ತಡೆಗಟ್ಟುವ ಉದ್ದೇಶದಿಂದ ಸೋಂಕಿತ ಪ್ರದೇಶಗಳನ್ನು ಸರ್ಕಾರದ ನಿರ್ದೇಶನದಂತೆ ನಿಯಂತ್ರಿತ ವಲಯ (ಕಂಟೇನ್ಮೆಂಟ್‌)ಗಳನ್ನಾಗಿ ಘೋಷಿಸಲಾಗಿದ್ದು, ಪ್ರದೇಶಕ್ಕೆ ಘಟನಾ ಕಮಾಂಡರ್‌ಗಳನ್ನು ನೇಮಿಸಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಆದೇಶಿಸಿದ್ದಾರೆ.

Advertisement

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ತರೀಕೆರೆ ಪಟ್ಟಣದ ತ್ಯಾಗರಾಜ ನಗರದಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿರುವ ಪ್ರದೇಶವನ್ನು ನಿಯಂತ್ರಿತ ವಲಯವನ್ನಾಗಿ ಘೋಷಿಸಲಾಗಿದ್ದು, ಸ್ಥಳಕ್ಕೆ ಘಟನಾ ಕಮಾಂಡರ್‌ರಾಗಿ ತರೀಕೆರೆ ತಾಲೂಕು ತಹಶೀಲ್ದಾರ್‌ ಸಿ.ಜಿ.ಗೀತಾ ಅವರನ್ನು (ಮೊ. ಸಂ: 7829893177) ನೇಮಿಸಲಾಗಿದೆ. ನಿಯಂತ್ರಿತ ವಲಯದ ಸುತ್ತಮುತ್ತಲಿನ 5.ಕಿ.ಮೀ. ವ್ಯಾಪ್ತಿ ಪ್ರದೇಶಗಳನ್ನು ನಿರ್ವಹಿಸಲಿದ್ದು, ಕೆ.ದಾಸರಹಳ್ಳಿಯ ಅಂಗನವಾಡಿ ಕೇಂದ್ರದಿಂದ ಘಟನಾ ನಿಯಂತ್ರಣ ಕೇಂದ್ರದ ಮೇಲ್ವಿಚಾರಣೆ ನಡೆಸಲಿದ್ದಾರೆ.

ಘಟನಾ ಕಮಾಂಡರ್‌ ಘಟನಾ ನಿಯಂತ್ರಣ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದು, ಘಟನಾ ಕೇಂದ್ರದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ಆಹಾರ, ದಿನಸಿ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳು ತಮ್ಮ ವ್ಯಾಪ್ತಿಯಲ್ಲಿನ ಅಂಗಡಿಗಳಲ್ಲಿ ಸಾಕಷ್ಟು ಲಭ್ಯವಿರುವಂತೆ ದೃಢಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next