Advertisement

ಕಾಫಿ ಬೆಳೆಗಾರರ ನೆರವಿಗೆ ಧಾವಿಸಿ

06:25 PM May 02, 2020 | Naveen |

ಚಿಕ್ಕಮಗಳೂರು: ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತದಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಿ.ಎಂ.ವಿಜಯ್‌ ಮನವಿ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಕಾಫಿ ಇಳವರಿ ಕುಂಠಿತ, 7-8 ವರ್ಷಗಳಿಂದ ಕಾಫಿ ಬೆಲೆಕುಸಿತ ಹಾಗೂ ಕಾಫಿ ಉಪಬೆಳೆಯಾದ ಕಾಳು ಮೆಣಸು ಬೆಲೆ ಕುಸಿತದಿಂದ ಬೆಳೆಗಾರರು ಕಾಫಿ ತೋಟ ನಿರ್ವಹಣೆ ಅಸಾಧ್ಯ ಎಂದರು. ಕಾಫಿ ಉದ್ಯಮ ಹೆಚ್ಚಿನ ಪ್ರಮಾಣದ ಕಾರ್ಮಿಕರನ್ನು ಅವಲಂಬಿಸಿದ್ದು, ಕಾರ್ಮಿಕರ ವೇತನ, ತೋಟ ನಿರ್ವಹಣೆ, ಬ್ಯಾಂಕ್‌ಸಾಲ ಎಲ್ಲಾ ಸಮಸ್ಯೆಯಿಂದ ಕಾಫಿ ಉದ್ಯಮ ನಿರ್ವಹಣೆ ಅಸಾಧ್ಯವಾಗಿದ್ದು, ಈಗ ಕೊರೊನಾ ಹೊಡೆತಕ್ಕೆ ಕಾಫಿ ಉದ್ಯಮವು ಸಿಲುಕಿದ್ದು ಉದ್ಯಮ ನಿರ್ವಹಣೆ ಮತಷ್ಟು ಕಷ್ಟವಾಗಿದೆ ಎಂದರು.

ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಅನೇಕ ಬಾರಿ ಕೇಂದ್ರ ಸರ್ಕಾರ ಮತ್ತು ವಾಣಿಜ್ಯ ಸಚಿವಾಲಯದ ಗಮನಕ್ಕೆ ತಂದರು ಸರ್ಕಾರ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದ ಅವರು, ಕಾಫಿ ಬೆಳೆಗಾರರು ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ತೀರಿಸಲು ಸಾಧ್ಯವಾಗದೆ ಕಾಫಿ ಬೆಳೆಯನ್ನೇ ಕೈಬಿಡುವ ಹಂತಕ್ಕೆ ಬಂದಿದ್ದಾರೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಕಾಫಿ ಉದ್ಯಮವನ್ನುಉಳಿಸುವುದರೊಂದಿಗೆ, ಬೆಳೆಗಾರರ ನೆರವಿಗೆ ಬರಬೇಕು. ಬೆಳೆಗಾರರ 10,500 ಕೋಟಿ ರೂ. ಬೆಳೆಗಾರರ ಸಾಲಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್‌, ವಸ್ತಾರೆ ಹೋಬಳಿ ಕಾμ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಒಕ್ಕೂಟದ ಪದಾಧಿ ಕಾರಿಗಳಾದ ಲವ, ಪ್ರಭು, ಸುರೇಂದ್ರ, ಪುಟ್ಟಣ್ಣ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next